ರಫೆಲ್ ಕಾರಣಕ್ಕೆ ಹಿಂದಕ್ಕೆ ಬಿದ್ದಿದ್ದ ಸ್ವೀಡನ್ ಫೈಟರ್: ಅಂತಿಮ ಹಂತಕ್ಕೆ ಖರೀದಿ ಮಾತುಕತೆ
ಭಾರತೀಯ ವಾಯುಸೇನೆಯೊಂದಿಗೆ ಚರ್ಚೆ
ರಂಜಿತ್ ಎಚ್. ಅಶ್ವತ್ಥ ಯಲಹಂಕ ವಾಯುನೆಲೆ
ನೆರೆಯ ಶತ್ರುರಾಷ್ಟ್ರಗಳ ಪಿತೂರಿಯ ನಡುವೆಯೂ ದಿನದಿಂದ ದಿನಕ್ಕೆ ತನ್ನ ವಾಯುಬಲವನ್ನು ವೃದ್ಧಿಸಿ ಕೊಳ್ಳಲು ಉತ್ಸುಕವಾಗಿರುವ ಭಾರತಕ್ಕೆ ಇದೀಗ ಸ್ವೀಡನ್ ಮೂಲದ ಗ್ರಿಪಿನ್ ಬಂದಿಳಿಯುವ ಸಾಧ್ಯತೆಗಳು ದಟ್ಟವಾಗಿದ್ದು, ಶೀಘ್ರವೇ ಈ ಬಗ್ಗೆ ವಾಯುಸೇನೆ ತೀರ್ಮಾನ ಕೈಗೊಳ್ಳಲಿದೆ.
ಹೌದು, ೨೦೧೮ರಲ್ಲಿ ರಫೆಲ್ ಹಾಗೂ ಗ್ರಿಪಿನ್ ನಡುವಿನ ಖರೀದಿ ಸ್ಪರ್ಧೆಯಲ್ಲಿ ಅಂತಿಮವಾಗಿ ರಫೆಲ್ ಮೊರೆ ಹೋಗಿದ್ದ ಭಾರತೀಯ ವಾಯುಸೇನೆ, ಇದೀಗ ಸುಧಾರಿತ ಗ್ರಿಪಿನ್ ಇಲ್ಲೇ ಖರೀದಿಸುವ ಸಂಬಂಧ ಮತ್ತೆ ಚರ್ಚೆಗಳನ್ನು ಆರಂಭಿಸಿದೆ. ಏರೋ ಇಂಡಿಯಾದಲ್ಲಿಯೂ ಭಾಗಿಯಾಗಿರುವ ಗ್ರಿಪಿನ್ ಫೈಟರ್ ಜೆಟ್ನ ಮೂಲ ಸ್ಯಾಬ್ ಸಂಸ್ಥೆ, ವಾಯುಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ಒಪ್ಪಂದ ಮಾಡಿಕೊಳ್ಳುವ ಉತ್ಸಾಹದಲ್ಲಿ ದ್ದಾರೆ.
ಈ ಹಿಂದೆ ಗ್ರಿಪಿನ್ ಖರೀದಿಸುವುದಕ್ಕೆ ಸಿದ್ಧತೆ ನಡೆಸಿದ್ದಾಗ, ‘ಪರಮಾಣು’ ಹೊತ್ತು ಹೋಗುವ ಸಾಮರ್ಥ್ಯವಿಲ್ಲ ಹಾಗೂ ಇನ್ನು ಕೆಲವು ನ್ಯೂನತೆಗಳಿದ್ದ ಕಾರಣಕ್ಕೆ ಭಾರತೀಯ ವಾಯುಸೇನೆ ಗ್ರಿಪಿನ್ಗೆ ಮಣೆ ಹಾಕಿರಲಿಲ್ಲ. ಆದರೀಗ, ಈ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡಿರುವ ಸ್ಯಾಬ್, ಮತ್ತೊಮ್ಮೆ ಭಾರತೀಯ ವಾಯುಸೇನೆ ಯೊಂದಿಗೆ ಚರ್ಚೆ ನಡೆಸಿದೆ. ಈ ಬಾರಿಯ ಸುಧಾರಿತ ಅಂಶಗಳು ಭಾರತೀಯ ವಾಯುಸೇನೆ ಸೂಕ್ತವಾಗಿರುವು ದರಿಂದ, ಒಪ್ಪಂದ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ ಎನ್ನುವ ಮಾತನ್ನು ಸ್ಯಾಬ್ ಸಂಸ್ಥೆಯ ಗ್ರಿಪಿನ್ ಭಾರತೀಯ ಯೋಜನೆ ಮುಖ್ಯಸ್ಥ ಹಾಗೂ ಮಾರಾಟ ವಿಭಾಗದ ಮುಖ್ಯಸ್ಥರಾಗಿರುವ ಕೆಂಟ್ ಅಕೇ ಮೊಲಿನ್ ಹೇಳಿದ್ದಾರೆ.
ಆತ್ಮನಿರ್ಭರಕ್ಕೆ ಕೊಡುಗೆ: ಇತ್ತೀಚಿನ ದಿನದಲ್ಲಿ ಆತ್ಮನಿರ್ಭರ ಭಾರತದತ್ತ ಭಾರತ ಸರಕಾರ ಹೆಚ್ಚು ಆಸಕ್ತಿ ತೋರುತ್ತಿದೆ. ಸ್ಯಾಬ್ ಸಂಸ್ಥೆಯೂ ಭಾರತದ ಈ ನಿಲುವನ್ನು ನಾವೂ ಒಪ್ಪುತ್ತೇವೆ. ಗ್ರಿಪಿನ್ ಯುದ್ಧವಿಮಾನವನ್ನು ಮಾರಾಟ ಮಾಡುವುದಷ್ಟೇ ಅಲ್ಲದೇ, ಅದನ್ನು ಮೀರಿದ ಸಂಬಂಧವನ್ನು ಉಳಸಿ ಕೊಳ್ಳಲು ಸ್ಯಾಬ್ ಬಯಸುತ್ತದೆ ಎಂದು ಸ್ಯಾಬ್ ಸಂಸ್ಥೆಯ ಗ್ರಿಪಿನ್ ಭಾರತೀಯ ಯೋಜನೆ ಮುಖ್ಯಸ್ಥ ಹಾಗೂ ಮಾರಾಟ ವಿಭಾಗದ ಮುಖ್ಯಸ್ಥ ರಾಗಿರುವ ಕೆಂಟ್ ಅಕೇ ಮೊಲಿನ್ ಅಭಿಪ್ರಾಯಪಟ್ಟಿದ್ದಾರೆ.
ಏರೋ ಇಂಡಿಯಾದಲ್ಲಿ ಭಾಗವಹಿಸಿರುವ ಸ್ಯಾಬ್ ಸಂಸ್ಥೆಯ ಪರವಾಗಿ ‘ವಿಶ್ವವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಗ್ರಿಪಿನ್ ಖರೀದಿಗೆ
ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆ, ಗ್ರಿಪಿನ್ ವಿಶೇಷತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಗ್ರಿಪಿನ್ ಖರೀದಿಸುವ ಸಂಬಂಧ ಭಾರತೀಯ ವಾಯು ಸೇನೆಯೊಂದಿಗೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದವು. ಈ ಹಿಂದೆ ನಡೆದು ಕೆಲ ಕಾರಣಗಳಿಂದ ಮುಂದುವರಿಸಲು ಆಗಿರಲಿಲ್ಲ. ಆದರೀಗ ಈ ಚರ್ಚೆಗಳು ಇನ್ನಷ್ಟು ಗಟ್ಟಿಯಾಗಿ ನಡೆದಿದ್ದು, ಭಾರತೀಯ ಸೇನೆಯೊಂದಿಗೆ ಕಾರ್ಯನಿರ್ವ ಹಿಸುವ ವಿಶ್ವಾಸವಿದೆ. ಕೆಲ ಸುತ್ತಿನ ಮಾತುಕತೆ ಬಾಕಿಯಿದ್ದು, ಶೀಘ್ರವೇ ಈ ಎಲ್ಲವನ್ನು ಪೂರ್ಣಗೊಳಿಸುವ ವಿಶ್ವಾಸವಿದೆ.
ಸ್ವದೇಶ ನಿರ್ಮಾಣಕ್ಕೆ ಒತ್ತು
ಇನ್ನು ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾಯೋಜನೆ ಗಳಿಗೆ ಪೂರಕವಾಗಿ ಕಳೆದ ಬಾರಿ ಸ್ಯಾಬ್ ಪ್ರತಿಕ್ರಿ ಯಿಸಿರಲಿಲ್ಲ. ಆದರೆ ಈ ಬಾರಿ ಭಾರತದ ಈ ಯೋಜನೆ ಗಳನ್ನುಕಾರ್ಯಗತಗೊಳಿಸಲು ಸ್ಯಾಬ್ ಸಜ್ಜಾಗಿದೆ. ಆದ್ದರಿಂದ ಒಪ್ಪಂದ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಆದರೆ ಯುದ್ಧ ವಿಮಾನದ ಮೊತ್ತ, ಎಷ್ಟುಯುದ್ಧವಿಮಾನ ಖರೀದಿ ಎನ್ನುವ ಬಗ್ಗೆ ಇನ್ನಷ್ಟೇ ಚರ್ಚೆ ನಡೆಯಬೇಕಿದೆ.
ಗ್ರಿಪಿನ್ ಇ ವಿಶೇಷಗಳೇನು?
೪.೫ ಜನರೇಷನ್ನ ಅತ್ಯಾಧುನಿಕ ಯುದ್ಧವಿಮಾನ
ಪ್ರತಿಗಂಟೆಗೆ ೧೪೦೦ ಕಿಮೀ ಹಾರುವ ಸಾಮರ್ಥ್ಯ
ಒಂಬತ್ತುಕ್ಷಿಪಣಿ, ೧೬ ಬಾಂಬ್ಗಳೊಂದಿಗೆ ಹಾರಾಡುವ ಗ್ರಿಪಿನ್ ೬೫೦೦ ತೂಕದ ಶಸ್ತ್ರಾಸ್ತ್ರವನ್ನು ಹೊತ್ತು ಒಯ್ಯುವ ಸಾಮರ್ಥ್ಯ ಸೆನ್ಸಾರ್ಗಳಿಂದ ೩೬೦ ಡಿಗ್ರಿಯಲ್ಲಿನ ವಿದ್ಯಮಾನದ ಬಗ್ಗೆ ಮಾಹಿತಿ ಶುತ್ರವಿನ ದಾಳಿಯನ್ನು ನಿಷ್ಕ್ರಿಯಗೊಳಿಸಲು ರಾಡಾರ್ ವ್ಯವಸ್ಥೆ ದೂರ, ಮಧ್ಯಮ ರೇಂಜ್ನಲ್ಲಿ ಆಕಾಸ ದಲ್ಲಿಯೇ ಕ್ಷಿಪಣಿದಾಳಿ ಸಾಧ್ಯ ಆಕಾಸದಲ್ಲಿರುವಾಗಲೇ, ಇಂಧನವನ್ನು ತುಂಬಿಸಬಹುದು
ಮೌಸರ್ ಬಿಕೆ ೨೭ ಮಿಮಿ ಗನ್ ಹೊಂದಿರುತ್ತದೆ
ಬಿಯಾಂಡ್ ವಿಷ್ಯುಯಲ್ ರೇಂಜ್ನಲ್ಲಿ ಸುಮಾರು ೮೦ ಮೈಲಿಗೂ ದೂರದಲ್ಲಿರುವ ವಸ್ತುವಿನ ಮೇಲೆ ನಿಖರ ದಾಳಿ