ಮುಂಬೈ: ‘ಅವಳು ಮನೆಯಲ್ಲಿದ್ದು ಮಗಳನ್ನು ನೋಡಿಕೊಂಡಿದ್ದಳು..!’ – ಪತ್ನಿ ಐಶ್ವರ್ಯಾ ರೈ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ನಟ ಅಭಿಷೇಕ್ ಬಚ್ಚನ್, ಡೈವೊರ್ಸ್ ವದಂತಿ ಸತ್ಯಕ್ಕೆ ದೂರ..!?ಅಭಿಷೇಕ್ ಬಚ್ಚನ್(Abhishek Bachchan) ಈಗ ಎರಡು ವಿಷಯಗಳಿಂದ ಸುದ್ದಿಯಲ್ಲಿದ್ದಾರೆ. ಒಂದು, ಅವರ ಐ ವಾಂಟ್ ಟು ಟಾಕ್
ಸಿನಿಮಾ ರಿಲೀಸ್ ಆಗಿ ಚೆನ್ನಾಗಿದೆ ಅಂತ ಜನ ಹೇಳ್ತಿದ್ದಾರೆ. ಇನ್ನೊಂದು, ಅಭಿಷೇಕ್ ಬಚ್ಚನ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ(Aishwarya Rai) ಜೊತೆ ಅವರದ್ದು ಡಿವೋರ್ಸ್(Divorce) ಆಗುತ್ತೆ ಅಂತೆಲ್ಲಾ ಗಾಳಿಸುದ್ದಿ(Rumaros) ಹಬ್ಬುತ್ತಿದೆ. ಈ ವಿಚ್ಚೇದನ ಸುದ್ದಿಗೆ ಕೊನೆಯೇ ಇಲ್ಲ ಅಂತೆನಿಸುತ್ತಿದೆ. ಈ ಜೋಡಿಯ ಒಂದೊಂದು ನಡೆಯನ್ನು ಗಮನಿಸುತ್ತಿರುವ ನೆಟ್ಟಿಗರು ಸೋಶಿಯಲ್ ಮೀಡಿಯಾ(social media)ದಲ್ಲಿ ಹೊಸ ಹೊಸ ಸುದ್ದಿಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತಲೇ ಇರುತ್ತಾರೆ.
ಹೌದು ಸಿನೆಮಾ ಬಿಟ್ಟರೆ, ಬಾಲಿವುಡ್ ಅಂಗಳದಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಇತ್ತೀಚೆಗೆ ಜೋರಾಗಿದೆ. ಇದಕ್ಕೆ ಕಾರಣ ಹಲವು. ಇತ್ತೀಚೆಗೆ ಐಶ್ವರ್ಯಾ ಬರ್ತ್ಡೇ ಆಚರಿಸಿಕೊಂಡರು. ಆದರೆ, ಅಭಿಷೇಕ್ ಕಡೆಯಿಂದ ಯಾವುದೇ ವಿಶ್ ಬರಲಿಲ್ಲ. ಈ ವಿಚಾರದಲ್ಲಿ ಕುಟುಂಬದವರು ಮೌನ ವಹಿಸಿದ್ದರು.
ಆದರೀಗ ‘ಐ ವಾಂಟ್ ಟು ಟಾಕ್’ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿರುವ ಅಭಿಷೇಕ್ ಬಚ್ಚನ್ ತನ್ನ ಪತ್ನಿಯ ಬಗ್ಗೆ ಮನ ಬಿಚ್ಚಿ ಮಾತಾನಾಡಿದ್ದಾರೆ. ಈ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಗಳನ್ನು ನಿರಾಕಾರಿಸಿದ್ದು, ತಾಯಿಯಾಗಿ ಐಶ್ವರ್ಯಾ ಮಾಡುತ್ತಿರುವ ಕೆಲಸದ ಕುರಿತು ಹೊಗಳಿದ್ದಾರೆ. ತಮ್ಮ ಮಗಳ ಬೆಳವಣಿಗೆಯಲ್ಲಿ ಐಶ್ವರ್ಯಾ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದು, ಆರಾಧ್ಯ ಲಾಲನೆ ಪಾಲನೆಯಲ್ಲಿಯಲ್ಲಿ ಐಶ್ವರ್ಯಾ ನಿರತವಾಗಿರುವುದರ ಕುರಿತು ಹಾಡಿ ಹೊಗಳಿದ್ದಾರೆ.
ಹೌದು ಸಂದರ್ಶನವೊಂದರಲ್ಲಿ ಮಾತನಾಡಿದ ನಟ, ನನಗೆ ಬಾಲ್ಯದಲ್ಲಿ ಎಂದಿಗೂ ಒಂಟಿತನ ಕಾಡಿಲ್ಲ, ನನ್ನ ನಮಗಾಗಿ ನಟನೆ ಬಿಟ್ಟರು. ಅಪ್ಪ ಇಲ್ಲದಿದ್ದಾಗಲೂ ನಮಗೆ ಒಂಟಿತನ ಕಾಡದಂತೆ ಅಮ್ಮ ನೋಡಿಕೊಂಡರು ಎಂದು ಅಭಿಷೇಕ್ ಬಚ್ಚನ್ ತನ್ನ ತಾಯಿಯ ತ್ಯಾಗದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಅಭಿಷೇಕ್ ಐಶ್ವರ್ಯಾ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದು, ನನ್ನ ಮನೆಯಲ್ಲಿ ನನಗೆ ಹೊರಗೆ ಬಂದು ಸಿನಿಮಾ ಮಾಡಲು ಸಾಧ್ಯವಾಗುತ್ತಿರುವುದು ನನ್ನ ಅದೃಷ್ಟ. ನನಗೆ ಗೊತ್ತು ಮನೆಯಲ್ಲಿ ಆರಾಧ್ಯ ಜೊತೆ ಐಶ್ವರ್ಯಾ ಇದ್ದಾಳೆ. ಅದಕ್ಕಾಗಿ ನಾನು ಅವಳಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಇನ್ನು ಕಳೆದ ಕೆಲವು ತಿಂಗಳಿನಿಂದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ವದಂತಿ ಹಲವು ದಿನಗಳಿಂದ ಓಡಾಡುತ್ತಲೇ ಇದೆ. ಅದಕ್ಕೆ ಪೂರಕ ಎಂಬಂತೆ ಪುತ್ರಿ ಆರಾಧ್ಯ ಹುಟ್ಟುಹಬ್ಬದ ಸಂದರ್ಭದಲ್ಲೂ ಐಶ್ವರ್ಯಾ ರೈ ಬಚ್ಚನ್ ಮಾತ್ರ ಕಾಣಿಸಿಕೊಂಡಿದ್ದು, ಅಭಿಷೇಕ್ ಬಚ್ಚನ್ ಗೈರಾಗಿರುವ ಫೋಟೊಗಳು ಓಡಾಡುತ್ತಿತ್ತು.
ಮದುವೆಗೂ ಮುಂಚೆ ಅಭಿಷೇಕ್, ಐಶ್ವರ್ಯಾ ಕುಚ್ ನಾ ಕಹೋ
, ಧೂಮ್ 2
, ಬಂಟಿ ಔರ್ ಬಬ್ಲಿ
, ಗುರು
, ಸರ್ಕಾರ್ ರಾಜ್
ಹೀಗೆ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ಮದುವೆಯಾದ ನಂತರ ಒಟ್ಟಿಗೆ ನಟಿಸಿದ್ದು ಮಣಿರತ್ನಂ ಅವರ ರಾವಣ್
ಸಿನಿಮಾದಲ್ಲಿ ಮಾತ್ರ. ಈ ಸಿನಿಮಾ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟ ಆಗಲಿಲ್ಲ. ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರ ಅಷ್ಟೇನು ಕಮಾಲ್ ಮಾಡಲಿಲ್ಲ.