ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಭಾನುವಾರ ಮತ್ತೋರ್ವ ಸ್ಪರ್ಧಿ ಔಟ್ ಆಗಿದ್ದಾರೆ. 90 ದಿನಗಳನ್ನು ಪೂರೈಸಿರುವ ಶೋನಲ್ಲಿ ಇದೀಗ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕಳೆದ ಕೆಲವು ವಾರಗಳಿಂದ ಇವರು ಡೇಂಜರ್ ಝೋನ್ನಲ್ಲೇ ಇದ್ದರು. ಅದರಲ್ಲೂ ಶಿಶಿರ್ ಶಾಸ್ತ್ರೀ ನಿರ್ಗಮನದ ಬಳಿಕ ಐಶ್ವರ್ಯಾ ಕೊಂಚ ಡಲ್ ಆಗಿದ್ದರು. ಇದೀಗ ಅಂತಿಮವಾಗಿ ಬಿಗ್ ಬಾಸ್ ಪ್ರಯಾಣವನ್ನು ಮಹತ್ವದ ಘಟ್ಟದಲ್ಲೇ ಕೊನೆಗೊಳಿಸಿದ್ದಾರೆ.
ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಇದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಐಶ್ವರ್ಯಾ ಹೆಸರು ಇತ್ತು. ಶನಿವಾರದ ಸಂಚಿಕೆಯಲ್ಲಿ ಕೇವಲ ಇಬ್ಬರನ್ನು ಮಾತ್ರ ಕಿಚ್ಚ ಸುದೀಪ್ ಸೇಫ್ ಮಾಡಿದ್ದರು. ಧನರಾಜ್ ಆಚಾರ್ ಮತ್ತು ಹನುಮಂತ ಆರಂಭದಲ್ಲಿ ಸೇಫ್ ಆಗಿದ್ದರು.
ಭಾನುವಾರದ ಎಪಿಸೋಡ್ನಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಸೇಫ್ ಆಗಿದ್ದಾರೆ. ಮೋಕ್ಷಿತಾ ಹಾಗೂ ಐಶ್ವರ್ಯಾ ಕೊನೆಯದಾಗಿ ಡೇಂಜರ್ ಝೋನ್ನಲ್ಲಿದ್ದರು. ಇವರಲ್ಲಿ ಐಶ್ವರ್ಯಾ ಮನೆಯಿಂದ ಔಟ್ ಆದರು. ಈ ಮೂಲಕ ಬಿಗ್ ಬಾಸ್ ಮನೆಯ 10 ಸದಸ್ಯರಲ್ಲಿ ಒಬ್ಬರು ಔಟ್ ಆಗಿದ್ದು, ಸದ್ಯ 9 ಮಂದಿ ಮುಂದಿನ ವಾರಕ್ಕೆ ಕಾಲಿಟ್ಟಿದ್ದಾರೆ.
ಅತಿ ಕಡಿಮೆ ವೋಟ್ ಪಡೆದ ಕಾರಣ ಐಶ್ವರ್ಯಾ ಮನೆಯಿಂದ ಆಚೆ ಬಂದಿದ್ದಾರೆ. ಐಶ್ವರ್ಯಾ ಅವರು ಇತ್ತೀಚೆಗೆ ಮಾತು ಮಾತಿಗೂ ಜಗಳಕ್ಕೆ ನಿಲ್ಲುತ್ತಿದ್ದರು. ಟಾರ್ಗೆಟ್ ನಾಮಿನೇಷನ್ ಬಗ್ಗೆ ಮಾತನಾಡಿ ತಾವೇ ಟಾರ್ಗೆಟ್ ಆಗಿ ಬಿಟ್ಟಿದ್ದರು. ಈ ಕಾರಣಗಳೇ ಅವರ ಆಟಕ್ಕೆ ಮುಳುವಾಯ್ತಾ ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ ಆಗಿದೆ.
ಐಶ್ವರ್ಯಾ ಅವರು ಬಿಗ್ ಬಾಸ್ ಪತ್ರದ ಮೂಲಕ ಮನೆಯಿಂದ ಆಚೆ ಹೋದರು. ”ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷದ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಎಲ್ಲ ಭಾವನೆಗಳಿಗೆ ಸಾಕ್ಷಿಯಾದ ಮನೆಯಿಂದ ಕಳಿಸಿಕೊಡುವುದು ಬೇಕಾಗಿದೆ” ಎಂದು ಬಿಗ್ ಬಾಸ್ ಪ್ರತದಲ್ಲಿ ಬರೆದಿದ್ದರು.
ಧನರಾಜ್ಗೆ ಕಿಚ್ಚನ ಚಪ್ಪಾಳೆ:
ಇಡೀ ವಾರದ ಟಾಸ್ಕ್ ನೋಡಿ ವಾರದ ಚಪ್ಪಾಳೆಯನ್ನು ಕಿಚ್ಚ ಸುದೀಪ್ ಅವರು ಧನರಾಜ್ ಆಚಾರ್ಯಗೆ ನೀಡಿದ್ದಾರೆ. ಕಿಚ್ಚ ಚಪ್ಪಾಳೆ ತಟ್ಟುತ್ತಿದ್ದಂತೆ ಧನರಾಜ್ ಫುಲ್ ಖುಷ್ ಆಗಿ ಕಣ್ಣೀರು ಕೂಡ ಹಾಕಿದರು. ಇವರ ಬೆಸ್ಟ್ ಫ್ರೆಂಡ್ ಹನುಮಂತ ಕೂಡ ಕೂಡಲೇ ಶುಭಕೋರಿದರು. ಇದೇ ಖುಷಿಯಲ್ಲಿ ಕಿಚ್ಚನ ಚಪ್ಪಾಳೆಯನ್ನು ಧನರಾಜ್ ಅವರು ತಮ್ಮ ಅಜ್ಜಿಗೆ ಅರ್ಪಿಸಿದ್ದಾರೆ.
BBK 11: ಕಿಚ್ಚನ ಎದುರೇ ಕೆಟ್ಟದಾಗಿ ಕಿತ್ತಾಡಿಕೊಂಡ ಚೈತ್ರಾ-ರಜತ್: ನೋಡುತ್ತಾ ನಿಂತ ಸುದೀಪ್