Tuesday, 12th November 2024

BBK 11 Nomination: ದೊಡ್ಮನೆಯಲ್ಲಿ ಎಲ್ಲರೂ ನಾಮಿನೇಟ್: ಬಿಗ್ ಬಾಸ್ ನೀಡಿದ ಕಾರಣ ಕೇಳಿ ಶಾಕ್ ಆದ ಸ್ಪರ್ಧಿಗಳು

BBK 11 Nomination

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಶುರುವಾಗಿ ಒಂದು ವಾರ ಕಳೆದಿದ್ದು, ಶೋ ರೋಚಕತೆ ಪಡೆಯುತ್ತಿದೆ. ಬಿಗ್ ಬಾಸ್ ಒಂದೊಂದೆ ಟಾಸ್ಕ್ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ ನಾಮಿನೇಷನ್ ಟಾಸ್ಕ್ ನಡೆಯುತ್ತಿದೆ. ಇಬ್ಬರು ಸ್ಪರ್ಧಿಗಳು ವೇದಿಕೆ ಮೇಲೆ ನಿಂತು ಯಾರು ಅರ್ಹ-ಯಾರು ಅನರ್ಹ ಎಂದು ಚರ್ಚಿಸಬೇಕು. ಇಬ್ಬರು ಸ್ಪರ್ಧಿಗಳ ಚರ್ಚೆಯನ್ನು ಗಮನಿಸಿ ಮನೆಯ ಕ್ಯಾಪ್ಟನ್‌ ಆದ ಹಂಸ ಅವರು ಯಾರು ನಾಮಿನೇಟ್‌ ಆಗಬೇಕೆಂದು ಮಸಿ ಬಳಿಯಬೇಕಿತ್ತು.

ನಿನ್ನೆಯ (ಅ. 7) ಮೊದಲ ಸಂಚಿಕೆಯಲ್ಲಿ ಧನರಾಜ್‌ ಆಚಾರ್, ತ್ರಿವಿಕ್ರಮ್‌ ಅನುಷಾ ರೈ ಹಾಗೂ ಗೋಲ್ಡ್ ಸುರೇಶ್ ನಾಮಿನೇಟ್‌ ಆಗಿದ್ದರು. ಇಂದು ಉಳಿದ ಸ್ಪರ್ಧಿಗಳ ನಡುವೆ ಮಾತಿನ ಕಾದಾಟ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದೀಗ ಬಂದಿರುವ ಸುದ್ದಿ ಎಲ್ಲರಿಗೂ ಅಚ್ಚರಿ ನೀಡಿದೆ. ಬಿಗ್ ಬಾಸ್ ಇಡೀ ಮನೆಯ ಸದಸ್ಯರನ್ನು ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಕಾರಣ ಕೂಡ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿಯುವ ಮುನ್ನ ಎರಡು ಬಾರಿ ಯೋಚಿಸಬೇಕು. ಒಮ್ಮೆ ರೂಲ್ಸ್ ಬ್ರೇಕ್ ಮಾಡಿದರೆ ಅದರ ಎಫೆಕ್ಟ್ ಆ ಸ್ಪರ್ಧಿಗೆ ಮಾತ್ರವಲ್ಲ, ಇಡೀ ಮನೆ ಅನುಭವಿಸಬೇಕಾಗುತ್ತದೆ. ಇದು ಮೊದಲ ವಾರದಲ್ಲಿಯೇ ಸ್ಪರ್ಧಿಗಳಿಗೆ ಅನುಭವ ಆಗಿತ್ತು. ಆದರೆ, ಇನ್ನೂ ಮನೆಯ ಸದಸ್ಯರು ಬಿಗ್ ಬಾಸ್ ನಿಯಮವನ್ನು ಸೀರಿಯೆಸ್ ಆಗಿ ತೆಗೆದುಕೊಂಡಿಲ್ಲ.

ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ಗೆ ತಯಾರಿ ಮಾಡಿಕೊಳ್ಳುವಾಗ ಪರದೆಯನ್ನು ಇಳಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆಗ ಸ್ಪರ್ಧಿಗಳು ಅದನ್ನು ತೆಗೆದು ಅಥವಾ ಇಣುಕಿ ನೋಡುವಂತಿಲ್ಲ. ಆದರೆ, ಇದೀಗ ಇದನ್ನು ಕೆಲ ಸ್ಪರ್ಧಿಗಳು ಕದ್ದು ಮುಚ್ಚಿ ನೋಡಿದ್ದಾರೆ.

ಮೊದಲಿಗೆ ಇಣುಕಿ ಬಂದ ಮಾನಸ ಅವರು, ಶಿಶಿರ್‌ ಬಳಿ ಬೆಲ್ಟ್‌ ಕಟ್ಟಿಕೊಂಡು ಓಡೋ ಥರ ಇದೆ ಎಂದಿದ್ದಾರೆ. ಇದು ಬಿಗ್‌ ಬಾಸ್‌ ಗಮನಕ್ಕೆ ಬಂದಿದ್ದು, ಎಲ್ಲ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ. ‘‘ಲೈನ್ಸ್‌ ಡೌನ್‌ ಆಗಿದ್ದಾಗ, ಅದರಿಂದ ಆಚೆಗೆ ಇಣುಕಿ ನೋಡಬಾರದು ಎಂಬುದು ಈ ಮನೆಯ ತುಂಬ ಮುಖ್ಯವಾದ ನಿಯಮ. ಈಗಷ್ಟೇ ಈ ನಿಯಮ ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ ಮನೆಯ ಎಲ್ಲಾ ಸದಸ್ಯರನ್ನು ಬಿಗ್‌ ಬಾಸ್‌ ನಾಮಿನೇಟ್‌ ಮಾಡುತ್ತಿದ್ದಾರೆ’’ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮನೆಮಂದಿ ಶಾಕ್ ಆಗಿದ್ದಾರೆ. ಈ ವಿಚಾರಕ್ಕೆ ಮನೆ ಮತ್ತೊಮ್ಮೆ ರಣರಂಗ ಆಗುವುದು ಖಚಿತ ಎನ್ನುತ್ತಿದ್ದಾರೆ ಪ್ರೇಕ್ಷಕರು.

BBK 11: ಬಿಗ್ ಬಾಸ್ ಮನೆಯನ್ನು ರಣರಂಗವಾಗಿಸಿದ ಅರ್ಹರು-ಅನರ್ಹರು ಟಾಸ್ಕ್: ರೊಚ್ಚಿಗೆದ್ದ ಭವ್ಯಾ ಗೌಡ