Saturday, 14th December 2024

BBK 11: ಬಿಗ್ ಬಾಸ್ ಮನೆಯನ್ನು ರಣರಂಗವಾಗಿಸಿದ ಅರ್ಹರು-ಅನರ್ಹರು ಟಾಸ್ಕ್: ರೊಚ್ಚಿಗೆದ್ದ ಭವ್ಯಾ ಗೌಡ

Aishwarya and Bhavya Gowda

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎರಡನೇ ವಾರಕ್ಕೆ ಪ್ರವೇಶಿಸಿದ್ದು ಕುತೂಹಲ ಮೂಡಿಸುತ್ತಿದೆ. ನಿಜವಾದ ಗೇಮ್ ಈಗ ಶುರುವಾಗುತ್ತಿದ್ದು ಸ್ಪರ್ಧಿಗಳು ಕೂಡ ಒಂದೊಂದೆ ವಿಚಾರವನ್ನು ತಿಳಿಯುತ್ತಿದ್ದಾರೆ. ಸಣ್ಣದಾಗಿ ಗುಂಪು ಕೂಡ ರಚನೆಯಾಗುತ್ತಿದೆ. ಸದ್ಯ ದೊಡ್ಮನೇಲಿ ಈ ವಾರದ ನಾಮಿನೇಷನ್​ನಿಂದ ಪಾರಾಗಲು ಯಾರು ಅರ್ಹರು?- ಯಾರು ಅನರ್ಹರು? ಎಂಬ ಟಾಸ್ಕ್ ನಡೆಯುತ್ತಿದೆ. ಎರಡನೇ ದಿನಕ್ಕೆ ಕಾಲಿಟ್ಟಿರುವ ಈ ಚಟುವಟಿಕೆಯಲ್ಲಿ ಇದೀಗ ವಾದ-ಪ್ರತಿವಾದಗಳು ಜೋರಾಗಿಯೇ ನಡೆಯುತ್ತಿದೆ.

ಮನೆಯ ಸದಸ್ಯರಿಗೆ ನಾಮಿನೇಟ್‌ ಮಾಡಲು ಬಿಗ್‌ ಬಾಸ್‌ ಒಂದು ಟಾಸ್ಕ್ ನೀಡಿದ್ದರು. ಇಬ್ಬರು ನಿಂತು ಯಾರು ಶ್ರೇಷ್ಠ ಎಂದು ಚರ್ಚಿಸಬೇಕಿತ್ತು. ಇಬ್ಬರು ಸ್ಪರ್ಧಿಗಳ ಚರ್ಚೆಯನ್ನು ಗಮನಿಸಿ ಮನೆಯ ಕ್ಯಾಪ್ಟನ್‌ ಆದ ಹಂಸ ಅವರು ಯಾರು ನಾಮಿನೇಟ್‌ ಆಗಬೇಕೆಂದು ಮಸಿ ಬಳಿಯಬೇಕಿತ್ತು. ಹಿಂದಿನ ಸಂಚಿಕೆಯಲ್ಲಿ ಧನರಾಜ್‌ ಆಚಾರ್, ತ್ರಿವಿಕ್ರಮ್‌ ಅನುಷಾ ರೈ ಹಾಗೂ ಗೋಲ್ಡ್ ಸುರೇಶ್ ನಾಮಿನೇಟ್‌ ಆಗಿದ್ದರು.

ಇಂದು ಎರಡನೇ ಸುತ್ತು ನಡೆಲಿದೆ. ಇದರಲ್ಲಿ ಭವ್ಯಾ ಹಾಗೂ ಗೌತಮಿ ನಡುವಣ ಚರ್ಚೆ ತಾರಕಕ್ಕೇರಿದೆ. ಭವ್ಯಾ ರೊಚ್ಚಿಗೆದ್ದಂತೆ ಕಾಣುತ್ತಿದೆ. ಭವ್ಯಾ ಅವರು ‘ಐಶ್ವರ್ಯಾ ಕೀಲಿ ಕೊಟ್ಟ ಗೊಂಬೆಯಂತೆ. ಇವರು ಕೀ ಕೊಟ್ಟರೆ ಮಾತ್ರ ಆಡುತ್ತಾರೆ. ಇಲ್ಲ ಅಂದರೆ ಇಲ್ಲ’ ಎಂದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಐಶ್ವರ್ಯಾ, ‘ಕೆಲವೊಂದ ಸಲ ಭವ್ಯಾ ಅವರು ಎದುರಾಳಿಯನ್ನು ತುಳಿದುಕೊಂಡು ಹೋಗ್ತಾರೆ ಅಂತ’ ಹೇಳಿದ್ದಾರೆ. ಇದರಿಂದ ಕೋಪಗೊಂಡ ಭವ್ಯಾ ‘ಎದುರಾಳಿ ಯಾರೇ ಇರಲಿ ಅವರನ್ನು ತುಳಿದೇ ಹೋಗಬೇಕು’ ಎಂದರು.

ಇದಕ್ಕೂ ಮುನ್ನ ರಂಜಿತ್‌ ಹಾಗೂ ಗೌತಮಿ ಮುಖಾಮುಖಿ ಆಗಿದ್ದು, ರಂಜಿತ್‌ ಅವರು ‘ಗೌತಮಿ ಅವರು ಆ್ಯಡ್‌ ತರ ಅಲ್ಲಲ್ಲಿ ಆಗಗ ಬರ್ತಾ ಇರ್ತಾರೆ ಅಷ್ಟೆ’ ಎಂದು ಹೇಳಿದ್ದಾರೆ. ಈ ಮಾತು ನಾನು ಒಪ್ಪಲ್ಲ ಎಂದು ಗೌತಮಿ ನೇರವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಇಂದು ಕೂಡ ಮಹತ್ವದ ಚರ್ಚೆ ನಡೆಯಲಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜುವಿನ ಬಾಯಿಮುಚ್ಚಿಸಿದ ಧನರಾಜ್ ಆಚಾರ್: ಏನಾಯಿತು?