Saturday, 14th December 2024

ಬಿಗ್‌ ಬಿ ಅಭಿನಯದ ‘ಜುಂಡ್ ‘ ಚಿತ್ರ ಜೂನ್ 18 ರಂದು ತೆರೆಗೆ

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ ‘ಜುಂಡ್ ‘ ಚಿತ್ರವನ್ನು ಜೂನ್ 18 ರಂದು ಚಿತ್ರಮಂದಿರ ದಲ್ಲಿ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ.

ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ನಟ ಅಮಿತಾಭ್, ಇದೀಗ ಮತ್ತೆ ಪುನರಾರಂಭ ಪಡೆಯುತ್ತಿದ್ದೇವೆ. ಜೂನ್ 18 ‘ಜುಂಡ್ ‘ ಸಿನಿಮಾ ಚಿತ್ರ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬಾಲಿವುಡ್ ನ ನಿರ್ದೇಶಕ ನಾಗರಾಜ್ ಪೊಪಾತ್ರಾವ್ ಮಂಜುಲೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು, ಸ್ಲಮ್ ಸೋಸರ್ NGO ದ ಸಂಸ್ಥಾಪಕ ವಿಜಯ್ ಬಾರ್ಸೆ ಅವರ ಜೀವನಾಧಾರಿತ ಸಿನಿಮಾ ಆಗಿದೆ. ನಟ ಅಮಿತಾಭ್ ಮುಖ್ಯ ಭೂಮಿಕೆಯ ಸಿನಿಮಾದಲ್ಲಿ ಆಕಾಶ್ ಥೋಸರ್ , ರಿಂಕು ರಾಜಗುರು ಬಣ್ಣ ಹಚ್ಚಿದ್ದಾರೆ.

 

‘ಗುಲಾಬೋ ಸೀತಾಬೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಭ್ ನಟನೆಯ ‘ಬ್ರಹ್ಮಾಸ್ತ್ರ’, “ಮೇ ಡೇ’ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ.