Monday, 25th November 2024

Anushka Sharma: ಮಕ್ಕಳ ದಿನಾಚರಣೆಗೆ ವಿಶೇಷ ಫೊಟೋ ಶೇರ್‌ ಮಾಡಿದ ಅನುಷ್ಕಾ ಶರ್ಮಾ…ಸೋ ಕ್ಯೂಟ್‌ ಎಂದ ಫ್ಯಾನ್ಸ್‌!

Anushka Sharma

ಮುಂಬೈ: ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್‌ ಕೊಹ್ಲಿ(Virat Kohli) ಸೋಶಿಯಲ್‌ ಮೀಡಿಯಾದಲ್ಲಿ ತಕ್ಕಮಟ್ಟಿಗೆ ಆಕ್ಟೀವ್‌ ಆಗಿರುವ ಜೋಡಿ. ಅದಾಗ್ಯೂ ಇದುವರೆಗೂ ತಮ್ಮ ಮುದ್ದು ಮಕ್ಕಳಾದ ವಮಿಕಾ (Vaamika) ಹಾಗೂ ಅಕಾಯ್‌ನ (Akaay) ಫೋಟೋವನ್ನು ಎಲ್ಲಿಯೂ ರಿವೀಲ್‌ ಮಾಡೇ ಇಲ್ಲ. ಈ ಜೋಡಿ ತಮ್ಮ ಮಕ್ಕಳ ಚಹರೆಯನ್ನು ಕೂಡಾ ಖಾಸಗಿಯಾಗಿಟ್ಟಿದ್ದಾರೆ. ನವೆಂಬರ್‌ 5 ರಂದು ವಿರಾಟ್‌ ಕೊಹ್ಲಿ ತಮ್ಮ 36 ನೇ ವಸಂತಕ್ಕೆ ಕಾಲಿಟ್ಟಿದ್ದು, ಅನುಷ್ಕಾ ವಿರಾಟ್‌ ಜೊತೆ ತಮ್ಮ ಮಕ್ಕಳ ಮುಖ ಹೈಡ್‌ ಮಾಡಲಾದ ಫೋಟೋವನ್ನು ಹಂಚಿಕೊಂಡಿದ್ದರು. ವಿರುಷ್ಕಾ ಜೋಡಿಯ ಮಕ್ಕಳನ್ನು ನೋಡಬೇಕೆಂದು ಕಾದು ಕುಳಿತಿದ್ದ ಅಭಿಮಾನಿಗಳು ನಿರಾಸೆಯನುಭವಿಸಿದ್ದರು. ಇದೀಗ ಮಕ್ಕಳ ದಿನಾಚರಣೆಗೆ (Children’s Day) ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಒಂದನ್ನು ಹಾಕಿದ್ದಾರೆ.

ಮಕ್ಕಳ ದಿನಾಚರಣೆ ಅಂಗವಾಗಿ ಸ್ಟೋರಿ ಹಂಚಿಕೊಂಡಿರುವ ಅನುಷ್ಕಾ ನೂಡಲ್ಸ್‌ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ. ಅದರ ಜೊತೆ ಸ್ಮೈಲ್‌, ಗಿಗಲ್‌, ಮತ್ತು ಮಿಲೆಟ್‌ ನೂಡಲ್ಸ್‌ ಎಂದು ಬರೆದುಕೊಂಡಿದ್ದಾರೆ.

ವಿರಾಟ್‌ ಜನ್ಮದಿನದಂದು ಇಬ್ಬರು ಮಕ್ಕಳನ್ನು ಕೊಹ್ಲಿ ಎತ್ತಿಕೊಂಡಿರುವ ಫೋಟೋವನ್ನು ಶೇರ್‌ ಮಾಡಿದ್ದರು. ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.  ʼʼರಾಜ ತನ್ನ ರಾಜಕುಮಾರ ಮತ್ತು ರಾಜಕುಮಾರಿಯೊಂದಿಗೆʼʼ ಎಂದು ಒಬ್ಬ ಹೇಳಿದ್ದರೆ ಇನ್ನೊಬ್ಬರು  ʼʼದಿನದ ಪೋಸ್ಟ್‌ʼʼ ಎಂದು ಕಮೆಂಟ್‌ ಮಾಡಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದರು.

ಇತ್ತೀಚೆಗೆ ಮುಂಬೈನ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಪತ್ನಿ, ಹಾಗೂ ಮಕ್ಕಳ ಜತೆ ಕಾಣಿಸಿಕೊಂಡ ವಿರಾಟ್‌ ಪತ್ರಕರ್ತರಿಗೆ ಮಕ್ಕಳು ಇದ್ದಾರೆ ದಯವಿಟ್ಟು ಪೋಟೋ ತೆಗೆಯಬೇಡಿ ಎಂದು ಮನವಿ ಮಾಡಿಕೊಂಡ ಘಟನೆ ನಡೆದಿದೆ. ವಿರಾಟ್ ಫೋಟೋಗಳಿಗೆ ಪೋಸ್ ನೀಡಿದಾಗ, ಅನುಷ್ಕಾ ಮತ್ತು ಮಕ್ಕಳು ಸದ್ದಿಲ್ಲದೆ ವಿಮಾನ ನಿಲ್ದಾಣದೊಳಗೆ ನಡೆದು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡರು.

ಇದನ್ನೂ ಓದಿ: Anushka Sharma : ಇಬ್ಬರು ಮಕ್ಕಳನ್ನು ಪೋಷಿಸುವ ಬವಣೆ ವಿವರಿಸಿದ ಅನುಷ್ಕಾ ಶರ್ಮಾ