Saturday, 14th December 2024

Bigg Boss kannada 11 : ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕಳಚಿತು ಈ ಮಹಿಳಾ ಸ್ಪರ್ಧಿಯ ಅಸಲಿ ಮುಖ

bigg Boss kannada 11

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್ 11ಕ್ಕೆ (Bigg Boss kannada 11) ಚಾಲನೆ ದೊರಕಿದೆ. ಒಟ್ಟು 17 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಕೊಟ್ಟಿದ್ದು, 10 ಜನ ಸ್ವರ್ಗ ಹಾಗೂ 7 ಜನರು ನರಕದಲ್ಲಿದ್ದಾರೆ. ಹಿಂದಿನ ಕೆಲವು ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿ ಕೆಲ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್​ಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇಂದು ರಾತ್ರಿ 9:30ಕ್ಕೆ ಮೊದಲ ಎಪಿಸೋಡ್ ಟೆಲಿಕಾಸ್ಟ್ ಆಗಲಿದೆ. ಆದರೆ, ಮೊದಲ ದಿನವೇ ಮಹಿಳಾ ಸ್ಪರ್ಧಿಯೊಬ್ಬರ ಅಸಲಿ ಮುಖ ಬಯಲಾಗಿದೆ.

ಖಾಸಗಿ ವಾಹಿನಿಯಲ್ಲಿ ಸತ್ಯ ಧಾರಾವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದ ಗೌತಮಿ ಜಾಧವ್ ಈ ಬಾರಿ ಬಿಗ್ ಬಾಸ್​ನಲ್ಲಿರುವ ಸ್ಟ್ರಾಂಗ್ ಮಹಿಳಾ ಕಂಟೆಸ್ಟೆಂಟ್​ಗಳಲ್ಲಿ ಒಬ್ಬರು. ಇಷ್ಟು ದಿನ ಟಾಮ್ ಬಾಯ್‌ಯಾಗಿ ಕನ್ನಡದ ಜನತೆಯನ್ನು ಸೆಳೆದಿದ್ದ ಸತ್ಯ, ಇದೀಗ ತಮ್ಮ ಅಸಲಿ ಹೇರ್​ಸ್ಟೈಲ್​ ರಿವೀಲ್ ಮಾಡಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಇಂದಿನ ಸಂಚಿಕೆಯ ಪ್ರೊಮೋದಲ್ಲಿ ಇದನ್ನು ತೋರಿಸಲಾಗಿದೆ.

‘‘ಇದೇ ರೀತಿ ನನ್ನನ್ನು ನೋಡಿ ಪ್ರೀತಿ ಕೊಟ್ಟು ಇಲ್ಲಿಯವರೆಗೆ ಬರೋಕೆ ಜನರು ನನ್ನ ಜೊತೆಗಿದ್ದಾರೆ. ನಿಮಗೆ ಕಾಣುವಂತ ನಾನು ಈಗ ನಾನಾಗಿ ಬದಲಾಗ್ತೀನಿ. ಗೌತಮಿಯ ಹೊಸ ಅಧ್ಯಾಯ ಇಲ್ಲಿಂದ ಶುರುವಾಗುತ್ತಿದೆ,’’ ಎಂದು ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಜಾಧವ್ ಅವರು ತಮ್ಮ ಹೇರ್​ಸ್ಟೈಲ್ ರಿವೀಲ್ ಮಾಡಿದ್ದಾರೆ.

ಸತ್ಯ ಧಾರಾವಾಹಿಯಲ್ಲಿ ಅಮುಲ್‌ ಬೇಬಿಯ ಮಡದಿಯಾಗಿ ಖಡಕ್‌ ರೋಲ್​ನಲ್ಲಿ ಮಿಂಚಿದ್ದ ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ಗೌತಮಿ ಅವರ ಹೊಸ ಲುಕ್ ನೋಡಲು ಜನರು ಕಾತುರದಿಂದ ಕಾಯುತ್ತಿದ್ದು, ಇದಕ್ಕೆ ಯಾವರೀತಿ ಪ್ರತಿಕ್ರಿಯೆ ಬರಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Bigg Boss kannada 11: ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ವೀಕ್ಷಕರ ಕಣ್ಮಣಿ! ಅತಿ ಹೆಚ್ಚು ಮತ ಪಡೆದವಳು ಕಿಚ್ಚನ ಮುಂದೆ ಕಣ್ಣೀರಿಟ್ಟದ್ದೇಕೆ?

ಇನ್ನು ಇದೇ ಪ್ರೊಮೋದಲ್ಲಿ ಲಾಯರ್ ಜಗದೀಶ್ ಹಾಗೂ ಚೈತ್ರಾ ಕುಂದಾಪುರ ಅವರ ಮಾತುಕತೆ ಕೂಡ ಇದ್ದು, ಜಗದೀಶ್ ಅವರು ಚೈತ್ರ ಅವರಿಗೆ ‘‘ನೀವು ಫೀಮೇಲ್ ಡಾನ್, ನಾನು ಮೇಲ್ ಡಾನ್’’ ಎಂದು ಹೇಳಿದ್ದಾರೆ. ಈ ಬಾರಿಯ ಬಿಗ್ ಬಾಸ್​ನಲ್ಲಿ ಇವರಿಬ್ಬರ ನಡುವೆ ಎಲ್ಲರ ಕಣ್ಣಿದೆ. ಮನೆಯಲ್ಲಿ ಜಗಳ ಶುರುವಾದರೆ ಅದು ಇವರಿಬ್ಬರಿಂದಲೇ ಎಂದು ಅನೇಕ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.