Thursday, 12th December 2024

ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ: 2ನೇ ವಾರದ ಮೊದಲ ದಿನ ದೊಡ್ಡ ಸುಳಿವು ಕೊಟ್ಟ ಜಗದೀಶ್

Lawyer Jagadish

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannda) ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇದೀಗ ಸ್ಪರ್ಧೆ ಇನ್ನಷ್ಟು ಕಠಿಣವಾಗಲಿದೆ. ಸರ್ಧಿಗಳು ಕೂಡ ಸವಾಲಿಗೆ ಸಜ್ಜಾಗುತ್ತಿದ್ದಾರೆ. ಮೊದಲ ವಾರದ ಪಂಚಾಯಿತಿಯಲ್ಲಿ ಕಿಚ್ಚನ ಮಾತು ಕೇಳಿ ಮಂಕಾಗಿದ್ದ ಕೆಲ ಸ್ಪರ್ಧಿಗಳು ಫಾರ್ಮ್​ಗೆ ಮರಳುತ್ತಿದ್ದಾರೆ. ಇವುಗಳ ಮಧ್ಯೆ ಈ ಬಾರಿಯ ಬಿಗ್ ಬಾಸ್​ನ ಸ್ಪೆಷಲ್ ಕಂಟೆಸ್ಟೆಂಟ್ ಜಗದೀಶ್ ಅವರು ಎರಡನೇ ವಾರ ಕೂಡ ಅಬ್ಬರಿಸುವ ಸೂಚನೆ ನೀಡಿದ್ದಾರೆ.

ಜಗದೀಶ್ ಅವರು ಮೊದಲ ವಾರ ಮನೆಯಲ್ಲಿ ಮಾಡಿದ ಅವಾಂತರ ಎಲ್ಲರಿಗೂ ತಿಳಿದಿದೆ. ವಿನಾಕಾರಣ ಇತರೆ ಸ್ಪರ್ಧಿಗಳ ಜೊತೆ ಜಗಳವಾಡುತ್ತಾ ಇದ್ದ ಇವರು ಬಳಿಕ ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದ್ದರು. ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರೆ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ? ಎಂದಿದ್ದರು.

ಜಗದೀಶ್ ಅವರ ಈ ಮಾತಿಗೆ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ವಾರ್ನಿಂಗ್ ನೀಡಿದ್ದರು. ಕ್ಯಾಮೆರಾ ಮುಂದೆ ಬಿಗ್ ಬಾಸ್​ಗೆ ಚಾಲೆಂಜ್ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ, ಅದೊಂದು ಜೋಕ್. ಈ ಶೋನ ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ ಎಂದು ಘರ್ಜಿಸಿದ್ದರು. ಇಲ್ಲಿಂದ ಸರಿಯಾಗುತ್ತಾರೆ ಎಂದುಕೊಂಡಿದ್ದ ಜಗದೀಶ್ ಇದೀಗ ಮತ್ತೆ ಹಳೆ ವರಸೆ ತೆಗೆದಂತಿದೆ.

ಎರಡನೇ ವಾರದ ಮೊದಲ ದಿನದ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಜಗದೀಶ್ ಅವರು ‘ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ’ ಎಂದು ಹೇಳಿದ್ದಾರೆ. ಕ್ಯಾಪ್ಟನ್ ಹಂಸ ಅವರ ವಿಶೇಷ ಅಧಿಕಾರದ ಮೇರೆಗೆ ನರಕ ಸ್ಪರ್ಧಿ ರಂಜಿತ್ ಕುಮಾರ್ ಸ್ವರ್ಗಕ್ಕೆ ಬಂದಿದ್ದು, ಸ್ವರ್ಗದಲ್ಲಿದ್ದ ಜಗದೀಶ್ ನರಕಕ್ಕೆ ತೆರಳಿದ್ದಾರೆ. ನರಕದಲ್ಲಿ ಮೋಕ್ಷಿತಾ ಪೈ ಮತ್ತು ಮಾನಸಾ ಜೊತೆ ಮಾತನಾಡುತ್ತಾ ಜಗದೀಶ್ ಅವರು ‘ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ’ ಎಂದು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅಬ್ಬರ ಮತ್ತೆ ಶುರು:

ಇಂದು ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ವೇದಿಕೆ ಮೇಲೆ ಸದಸ್ಯರು ಬಂದು ನಿಲ್ಲಬೇಕು ಮತ್ತು ಅವರು ಮನೆಯಲ್ಲಿ ಇರಲು ಯಾರು ಅರ್ಹರು ಮತ್ತು ಯಾರು ಅನರ್ಹರು ಎಂದು ಒಬ್ಬೊಬ್ಬರಾಗಿ ಕಾರಣ ನೀಡಿ ವಾದ-ಪ್ರತಿವಾದ ಮಾಡಬೇಕು. ಈ ಸಂದರ್ಭ ನರಕ ವಾಸಿಗಳಾದ ಚೈತ್ರಾ ಮತ್ತು ಮಾನಸಾ ನಡುವೆ ದೊಡ್ಡ ವಾರ್ ನಡೆದಿದೆ. ಚೈತ್ರಾ ಅವರು, ‘ನೀವೆಲ್ಲ ಟೀಮ್ ಮಾಡಿಕೊಂಡು ಆಮೇಲೆ ನನ್ನ ಒಬ್ಬಳ ಮೇಲೆ ಬ್ಲೇಮ್ ಮಾಡಿದ್ರೆ ಅದನ್ನು ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ’ ಎಂದು ಮಾನಸಾಗೆ ಹೇಳಿದ್ದಾರೆ.

BBK 11: ನರಕದಿಂದ ಸ್ವರ್ಗಕ್ಕೆ ಬಂದ ಒಬ್ಬ ಸ್ಪರ್ಧಿ: ಹಂಸ ಕರೆಸಿದ್ದು ಯಾರನ್ನು ನೋಡಿ