ಒಂಬತ್ತನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಟಾಸ್ಕ್ನ ಕಾವು ಏರುತ್ತಿದೆ. ಕಳೆದ ವೀಕೆಂಡ್ನಲ್ಲೇ ಕಿಚ್ಚ ಸುದೀಪ್ ಅವರು ಮುಂದಿನ ವಾರದಿಂದ ಕಠಿಣ ಟಾಸ್ಕ್ಗಳು ಪ್ರಾರಂಭ ಆಗುತ್ತವೆ ಎಂದು ಹೇಳಿದ್ದರು. ಅದರಂತೆ ಸದ್ಯ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದು, ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಹಾಗೂ ಯುವರಾಣಿಯಾಗಿ ಮೋಕ್ಷಿತಾ ಪೈ ಮೆರೆಯುತ್ತಿದ್ದಾರೆ. ಇದರ ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ.
ನಾಮಿನೇಷನ್ ಮಾಡುವ ಸಂದರ್ಭ ಚೈತ್ರಾ ಕುಂದಾಪುರ ಹಾಗೂ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟ ರಜತ್ ಕಿಶನ್ ನಡುವೆ ಮಾತಿನ ಸಮರ ನಡೆದಿದೆ. ಆದರೆ, ಪ್ರತಿ ಬಾರಿಯಂತೆ ಈ ಬಾರಿ ಕೂಡ ಸ್ಪರ್ಧಿಗಳು ನಾಮಿನೇಷನ್ಗೆ ನೀಡಿದ ಕಾರಣಗಳು ತೀರಾ ಚಿಕ್ಕದಾಗಿದೆ. ಕಳೆದ ವೀಕೆಂಡ್ನಲ್ಲಿ ಸುದೀಪ್ ಅವರು ನಾಮಿನೇಷನ್ ಮಾಡುವಾಗ ಸ್ಟ್ರಾಂಗ್ ರೀಸನ್ ಇರಲಿ ಎಂದಿದ್ದರು. ಆದರೆ, ಕೆಲ ಸ್ಪರ್ಧಿಗಳು ಈ ಬಾರಿ ಮತ್ತದೆ ತಪ್ಪು ಮಾಡಿದ್ದಾರೆ. ಮುಖ್ಯವಾಗಿ ಚೈತ್ರಾ ಕುಂದಾಪುರ.
ನಾಮಿನೇಷನ್ ವಿಚಾರಕ್ಕೆ ಕಿಚ್ಚ ಸುದೀಪ್, ಬೇರೆಯವರ ಮಧ್ಯೆ ಏನೋ ಆಗಿದೆ ಎಂದಾಗ ಅದೇ ವಿಚಾರ ಇಟ್ಟುಕೊಂಡು ಯಾವುದೇ ಕಾರಣಕ್ಕೂ ನಾಮಿನೇಟ್ ಮಾಡಬಾರದು ಎಂದಿದ್ದರು. ರಜತ್ ಅವರು ಸುರೇಶ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ ಕಾರಣ ನೀಡಿ ನಾಮಿನೇಟ್ ಮಾಡೋದು ತಪ್ಪು. ನೀವು ಜೋಕರ್ಗಳ ರೀತಿ ಕಾಣುತ್ತೀರಿ ಎಂದಿದ್ದರು ಸುದೀಪ್.
ಆದರೆ, ಚೈತ್ರಾ ಅವರು ಈ ವಾರ ನಾಮಿನೇಟ್ ಮಾಡುವಾಗ ಮತ್ತದೆ ತಪ್ಪು ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಅವರು, ‘ರಜತ್ ಪ್ರತಿ ಬಾರಿ ಬಾಸ್, ಬಾಸ್ ಅಂದಾಗ ಅದರಲ್ಲೊಂದು ವ್ಯಂಗ್ಯ ಕಾಣುತ್ತೆ. ಮನೆಯಿಂದ ಹೊರಗಡೆ ಹೋಗೋದಕ್ಕೆ ರೆಡಿ ಆಗಿದ್ದೀನಿ ಅಂತ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಚೈತ್ರಾ ಅವರ ಮಾತಿಗೆ ತಿರುಗೇಟು ಕೊಟ್ಟ ರಜತ್, ‘ಈವಾಗಲೂ ಹೇಳ್ತೀನಿ ನಮ್ಮ ಬಾಸ್ ಇವರು. ಬರೀ ಬಾಸ್ ಅಂದಿದ್ದಕ್ಕೆ ಮನೆಯಿಂದ ಆಚೆ ಕಳುಹಿಸುತ್ತಾರಂತೆ ಅದಕ್ಕೆ ನಮ್ಮ ಬಾಸ್ ಇವ್ರು. ಬಾಸ್ ನಾನು ಈಗಲೂ ಹೇಳುತ್ತೇನೆ ಕೇಳಿಸಿಕೊಳ್ಳಿ. ನಿಮ್ಮನ್ನ ಮನೆಯಿಂದ ಹೊರಗೆ ಕಳುಹಿಸೋವರೆಗೂ ನಾನು ಹೋಗಲ್ಲ ಬಾಸ್’ ಎಂದು ಹೇಳಿದ್ದಾರೆ. ಇಷ್ಟೊಂದು ಸಣ್ಣ ಕಾರಣವನ್ನು ನಾಮಿನೇಷನ್ಗೆ ಕೊಟ್ಟ ಬಗ್ಗೆ ಈ ವೀಕೆಂಡ್ ಸುದೀಪ್ ಏನು ಹೇಳುತ್ತಾರೆ ನೋಡಬೇಕು.
BBK 11: ಮಂಜು ಮಹಾರಾಜರ ಪಟ್ಟ ಕಿತ್ತುಕೊಳ್ಳಲು ಬಂದ ಯುವರಾಣಿ ಮೋಕ್ಷಿತಾ: ಇಬ್ಭಾಗವಾದ ಬಿಗ್ ಬಾಸ್ ಮನೆ