Sunday, 6th October 2024

ಟಾಸ್ಕ್ ಮಧ್ಯೆ ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳು: ಆಸ್ಪತ್ರೆಗೆ ದಾಖಲಾದ ಗೋಲ್ಡ್‌ ಸುರೇಶ್‌, ತ್ರಿವಿಕ್ರಂ?

BBK Task

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಪಡೆಯುತ್ತಿದೆ. ಇದೀಗ ಒಂದೊಂದೆ ಟಾಸ್ಕ್ ಶುರುವಾಗಿದ್ದು, ಸ್ಪರ್ಧಿಗಳು ಪೈಪೋಟಿಗೆ ಬಿದ್ದಂತೆ ಆಡುತ್ತಿದ್ದಾರೆ. ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಮ್ಮದೇ ರೀತಿಯಲ್ಲಿ ಆಡುತ್ತಿದ್ದಾರೆ. ಇದನ್ನು ಕಂಡು ಬಿಗ್ ಬಾಸ್ ಗರಂ ಆಗಿದ್ದು ಇಡೀ ಮನೆಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ಟಾಸ್ಕ್ ಆಡುವಾಗ ಅವಘಡ ಸಂಭವಿಸಿ ಗೋಲ್ಡ್ ಸುರೇಶ್ ಹಾಗೂ ತ್ರಿವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಬಿಗ್ ಬಾಸ್​ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಗುಂಪುಗಳಿವೆ. ಇವರ ಮಧ್ಯೆ ಟಾಸ್ಕ್ ನೀಡಲಾಗಿದೆ. ಸ್ವರ್ಗ ನಿವಾಸಿಗಳು ಸ್ವರ್ಗದಲ್ಲಿ ಉಳಿದುಕೊಳ್ಳಲು ಮತ್ತು ನರಕ ವಾಸಿಗಳು ಸ್ವರ್ಗದ ಕದ ತಟ್ಟಲು ಬಿಗ್ ಬಾಸ್ ಟಾಸ್ಕ್ ಏರ್ಪಡಿಸಿದ್ದರು. ಮೇಲಿರುವ ಚೆಂಡನ್ನು ಕೋಲಿನ ಸಹಾಯದಿಂದ ತೆಗೆದು ಬಲೆಗೆ ಹಾಕಬೇಕು. ಟಾಸ್ಕ್ ಆಡುವಾಗ ಎರಡೂ ಗುಂಪಿನ ಸದಸ್ಯರು ತುಂಬಾ ಎಗ್ರೆಷನ್​ನಿಂದ ಆಟವಾಡಿದ್ದಾರೆ. ಆಟದ ನಿಯಮವನ್ನೇ ಮೀರಿ ಮನಬಂದಂತೆ ಆಡಿದ್ದಾರೆ. ಇದೀಗ ಬಿಗ್ ಬಾಸ್ ಇವರಿಗೆ ನೀತಿ ಪಾಠ ಹೇಳಿದ್ದಾರೆ.

‘‘ಆಟದ ಉದ್ದೇಶ ಇರುವುದು ಚೆಂಡನ್ನು ರಕ್ಷಿಸಿಕೊಳ್ಳಬೇಕೆಂದು. ಗೆಲುವನ್ನು ಸಾಧಿಸುವ ಛಲದಲ್ಲಿ ಉದ್ದೇಶವನ್ನು ಮರೆಯುವುದು ಮೃಗೀಯ ಪ್ರವೃತ್ತಿ ಎಂದು ಹೇಳಬಹುದು. ಈ ಪ್ರವೃತ್ತಿಯನ್ನು ಹತೋಟಿಯಲ್ಲಿಕೊಂಡು ಆಡಿ ಗೆದ್ದಾಗಲೆ ಮನುಷ್ಯರು ಎಂದೆನಿಸಿಕೊಳ್ಳುವುದು’’ ಎಂಬ ಸಂದೇಶ ಬಿಗ್ ಬಾಸ್​ನಿಂದ ಬಂದಿದೆ.

ಸುರೇಶ್-ತ್ರಿವಿಕ್ರಂ ಆಸ್ಪತ್ರೆಗೆ ದಾಖಲು:

ಟಾಸ್ಕ್ ಆಡುವಾಗ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಂ ನೆಲಕ್ಕೆ ಅವರು ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಅವರನ್ನು ಕನ್ಫೆಷನ್​ ರೂಂಗೆ ಕರೆತರುವಂತೆ ಬಿಗ್ ಬಾಸ್ ಆದೇಶ ನೀಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಅದೇ ರೀತಿ ಗೋಲ್ಡ್​ ಸುರೇಶ್​ಗೂ ಪೆಟ್ಟಾಗಿದ್ದು ಇವರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಬಂದಿಲ್ಲ. ಕಲರ್ಸ್ ಕನ್ನಡ ಕೂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

ಗೋಲ್ಡ್ ಸುರೇಶ್ ಆಡಿದ ಆ ಮಾತಿಗೆ ಗೊಳೋ ಅಂತ ಅಳುತ್ತಾ ಗಾರ್ಡರ್ ಏರಿಯಾಗೆ ಓಡಿದ ಐಶ್ವರ್ಯ