Saturday, 14th December 2024

ಕೆಲವೇ ಕ್ಷಣಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ವಿಚಾರಣೆ

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್‌ ನಡುವೆ ಸುಮಾರು 40 ನಿಮಿಷಗಳ ಸಂಭಾಷಣೆ ಇರುವ ಆಡಿಯೋ ಕುರಿತಂತೆ, ಶುಕ್ರವಾರ ನಟಿ ರಾಧಿಕಾ ಅವರು ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಯುವರಾಜ್‌ ಮೊಬೈಲ್‌ ಪರಿಶೀಲನೆ ವೇಳೆ ಸಿಸಿಬಿಗೆ ಆಡಿಯೋ ಸಿಕ್ಕಿದೆ. ರಾಜ್ಯದ ರಾಜಕೀಯ ವ್ಯಕ್ತಿಯೊಬ್ಬರ ವಿಚಾರವಾಗಿ ಇಬ್ಬರು ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಯುವರಾಜ್‌, ಹಣಕಾಸು ಹಾಗೂ ವೈಯಕ್ತಿಕ ವಿಚಾರದ ಬಗ್ಗೆಯೂ ಮಾತನಾಡಿ ದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳುತಿಳಿಸಿವೆ.