ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹತ್ತನೇ ವಾರ ಮನೆಯಿಂದ ಯಾರು ಹೋಗುತ್ತಾರೆ ಎಂಬುದು ಕುತೂಹಲ ಎಲ್ಲರಲ್ಲೂ ಇತ್ತು. 10ನೇ ವಾರ 8 ಮಂದಿ ನಾಮಿನೇಟ್ ಆದ್ದರು. ಈ ಲಿಸ್ಟ್ನಲ್ಲಿ ಉಗ್ರಂ ಮಂಜು, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಭವ್ಯಾ ಗೌಡ, ಐಶ್ವರ್ಯಾ ಶಿಂಧೋಗಿ, ರಜತ್ ಕಿಶನ್ ಹಾಗೂ ಗೋಲ್ಡ್ ಸುರೇಶ್ ಇದ್ದರು. ಆದರೆ, ಈ ಎಲಿಮಿನೇಷನ್ ವಿಚಾರದಲ್ಲಿ ಬಿಗ್ ಬಾಸ್ ಟ್ವಿಸ್ಟ್ ನೀಡಿದರು.
ನಾಮಿನೇಟ್ ಆದವರ ಪೈಕಿ ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾಧವ್, ಭವ್ಯಾ ಗೌಡ, ರಜತ್ ಕಿಶನ್ ಹಾಗೂ ಗೋಲ್ಡ್ ಸುರೇಶ್ ಸೇಫ್ ಆಗಿದ್ದಾರೆ. ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ಶಿಂಧೋಗಿ ಡೇಂಜರ್ ಝೋನ್ನಲ್ಲಿದ್ದರು. ಸುದೀಪ್ ಅವರು ಇವರಿಬ್ಬರನ್ನೂ ಒಂದು ರೂಮ್‌ಗೆ ಹೋಗಲು ಹೇಳುತ್ತಾರೆ. ಆದರೆ ಇಬ್ಬರದ್ದೂ ಬೇರೆ ಬೇರೆ ರೂಮ್ ಆಗಿತ್ತು. ಒಂದು ವೇಳೆ ಇಬ್ಬರೂ ವಾಪಸ್ಸು ಬರಲಿಲ್ಲ ಅಂದರೆ ಎಲಿಮಿನೇಟ್ ಆದರು ಎಂದರ್ಥ ಎಂದು ಸುದೀಪ್ ಹೇಳಿದರು.
ಅದರಂತೆ ಚೈತ್ರಾ ಕುಂದಾಪುರ ಅವರನ್ನ ಕನ್ಫೆಷನ್ ರೂಮ್‌ಗೆ ಮತ್ತು ಐಶ್ವರ್ಯ ಅವರನ್ನ ಆ್ಯಕ್ಟಿವಿಟಿ ರೂಮ್‌ಗೆ ಕಳುಹಿಸಲಾಗಿದೆ. ಸುದೀಪ್ ಅವರು ಚೈತ್ರಾ ಅವ್ರೇ ಐಶ್ವರ್ಯ ಅವ್ರೇ ಒಬ್ರು ಹೋಗ್ತಿರೋ, ಇಬ್ಬರು ಹೋಗ್ತಿರೋ ಅನ್ನೋ ಟೆನ್ಶನ್ ಕೂಡ ನೀಡಿದರು. ಆದರೆ, ಚೈತ್ರಾ ಕುಂದಾಪುರ ಅವರಿಗೆ ಕನ್ಫೆಷನ್ ರೂಮ್‌ನಲ್ಲಿ ವಿಶೇಷ ವಿಡಿಯೋ ಪ್ಲೇ ಆಗಿದೆ.
ಚೈತ್ರಾಗೆ ಸ್ಪರ್ಧಿಗಳು ಅವರ ಹಿಂದೆ ಮಾತನಾಡಿರುವ ವಿಡಿಯೋವನ್ನು ಪ್ಲೇ ಮಾಡಿ ತೋರಿಸಿದ್ದಾರೆ. ಅದರಲ್ಲಿ ತ್ರಿವಿಕ್ರಮ್, ಮಂಜು, ರಜತ್ ಚೈತ್ರಾ ಬಗ್ಗೆ ನೆಗೆಟಿವ್ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಔಟ್ ಆದರು ಎಂದು ಭಾವಿಸಿ ರಜತ್ ಅವರು ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್ ಅನ್ನಿಸಿರಬಹುದು ಎಂದಿದ್ದಾರೆ.
ಅತ್ತ ಹನುಮಂತ ಚೈತ್ರಕ್ಕ ಹೋದಳು ಪಾಪ ಎಂದರೆ ಧನರಾಜ್ ಅವರು ಚೈತ್ರಾ ಅವರಿಗೆ ಟಾ ಟಾ, ಬೈ, ಬೈ ಮಾಡಿದ್ದಾರೆ. ಈ ಎಲ್ಲಾ ಮಾತುಗಳನ್ನ ಚೈತ್ರಾ ಕುಂದಾಪುರ ಅವರು ಕನ್ಫೆಷನ್ ರೂಮ್‌ನಲ್ಲಿ ಕೇಳಿಸಿಕೊಂಡಿದ್ದಾರೆ. ಇದನ್ನು ನೋಡಿದ ಚೈತ್ರಾಗೆ ನಿಜವಾದ ಬಿಗ್ ಬಾಸ್ ಆಟ ಇದೇ ಇರಬಹುದು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
BBK 11: ತ್ರಿವಿಕ್ರಮ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲು ಏನು ಕಾರಣ?, ಗೌತಮಿ ಜೊತೆ ಮಾತಾಡಿದ್ದು ಏನು?