Thursday, 31st October 2024

BBK 11: ಮುಗ್ಧ ಹನುಮಂತನ ಮುದ್ದು ಕೋರಿಕೆ: ದೇವರ ಬಳಿ ಏನಂತ ಬೇಡಿಕೆ ಇಟ್ರು ನೋಡಿ

Hanumantha Prays

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಐದನೇ ವಾರದ ಕ್ಯಾಪ್ಟನ್ ಆಗಿ ಸಿಂಗರ್ ಹನುಮಂತ ಅವರು ಆಯ್ಕೆ ಆದರು. ತನ್ನ ಚುರುಕುತನ ಹಾಗೂ ಗೇಮ್ ಪ್ಲಾನ್ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದು ಇವರು ಮನೆಯ ಹೊಸ ನಾಯಕರಾದರು. ಹನುಮಂತ ಕ್ಯಾಪ್ಟನ್ ಆಗಿದ್ದನ್ನು ಕಂಡು ಇಡೀ ಮನೆ ಖುಷಿ ಜೊತೆಗೆ ಶಾಕ್ ಆಗಿದೆ. ಅದರಲ್ಲೂ ಧನರಾಜ್ ಆಚಾರ್ ಇವರನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಯೊಳಗೆ ರೌಂಡ್ ಹಾಕಿದರು.

ಮನೆಯೊಳಗೆ ಕಾಲಿಟ್ಟ ಮೊದಲ ಎರಡು ದಿನ ಇವರಿಗೆ ಬಿಗ್ ಬಾಸ್ ಕ್ಯಾಪ್ಟನ್ ಅವಕಾಶ ನೀಡಿದ್ದರು. ಆದರೆ, ಆ ಸಂದರ್ಭ ಏನು ತಿಳಿಯದೆ ಅನೇಕ ತಪ್ಪೆಸಗಿದ್ದರು. ಆದರೀಗ ಮನೆಯಲ್ಲಿ ಒಂದು ವಾರ ಕಳೆದಿದ್ದು, ನಾಯಕತ್ವದ ಜವಾಬ್ದಾರಿ ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇದರ ಮಧ್ಯೆ ನನ್ನ ನಾಯಕತ್ವದಲ್ಲಿ ಯಾವುದೇ ತೊಂದರೆ ಆಗದಿರಲಿ ಎಂದು ಹನುಮಂತ ಅವರು ದೇವರ ಬಳಿ ಮುದ್ದಾಗಿ ಕೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿರುವ ದೇವರ ಮೊರೆ ಹೋಗಿರುವ ಹನುಮಂತ ‘ಓ ದೇವರೇ..!’ ಎಂದು ದೀಪ ಬೆಳಗಿ ಕೈಮುಗಿದಿದ್ದಾರೆ. ಎಲ್ಲರಿಗೂ ಒಳ್ಳೇದು ಮಾಡವ್ವ. ಈ ಬಿಗ್ ಬಾಸ್ ಮನೆಯೊಳಗೆ ಒಟ್ಟ ಜಗಳ ಆಗ್ದೇ ಇರಲಿ. ನಾನು ಕ್ಯಾಪ್ಟನ್ ಇರೋ ತನಕ ಯಾವುದು ಜಗಳ ಆಗೋಕೆ ಬಿಡಬೇಡ. ಎಲ್ಲರನ್ನೂ ಶಾಂತಿ ರೀತಿಯಿಂದ ಇರಿಸು” ಎಂದು ಬೇಡಿಕೊಂಡಿದ್ದಾರೆ.

ಆಗ ಮಧ್ಯ ಪ್ರವೇಶ ಮಾಡಿದ ಧನರಾಜ್, ಏನೇ ಸಮಸ್ಯೆ ಬಂದರೂ ಎದುರಿಸುವ ಶಕ್ತಿ ಕೊಡು ಎಂದು ಬೇಡಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಹನುಮಂತ ಅವರು ಇಲ್ಲ, ಇಲ್ಲ ಹಂಗೆ ಬೇಡ, ಸಮಸ್ಯೆಯೇ ಬರವಲ್ದಂಗೆ ನಡೆಸಿಕೋ ಎಂದಿದ್ದಾರೆ.

ಹನುಮಂತನ ಅಸಲಿ ಆಟ ಶುರು:

ಕ್ಯಾಪ್ಟನ್ ಹನುಮಂತು ಅವರು ತಮ್ಮ ಆಯ್ಕೆಯ ಮನೆಯ ಸದಸ್ಯರನ್ನು ನಾಮಿನೇಟ್‌ ಮಾಡಬಹುದು ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಅದರಂತೆ ಎಲ್ಲ ಸ್ಪರ್ಧಿಗಳ ಮುಂದೆಯೇ ಬಂದ ಹನುಮಂತು, ಮೊದಲಿಗೆ ಗೋಲ್ಡ್‌ ಸುರೇಶ್‌ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಬಳಿಕ ಭವ್ಯಾ ಯಾವುದರಲ್ಲೂ ಜಾಸ್ತಿ ಭಾಗವಹಿಸಲಿಲ್ಲ ಎಂದು ಹೇಳಿ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಕೊನೆಯದಾಗಿ ಮಾನಸಕ್ಕ ಒಂಥರಾ ಬಾಂಬ್ ಇದ್ಹಂಗೆ. ಸೌಂಡ್ ಮಾಡೋದಕ್ಕೆ ಹೋದರೆ ಅಲ್ಲೇ ಠುಸ್‌ ಅನ್ನುತ್ತೆ ಎಂದಿದ್ದಾರೆ ಹನುಮಂತ.

BBK 11: ಮದುವೆಯ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಮೋಕ್ಷಿತಾ ಪೈ