Friday, 20th September 2024

Highest Tax-Paying Celebs: ಇವರೇ ಅತೀ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳು; ಸಂಪೂರ್ಣ ಪಟ್ಟಿ ಇಲ್ಲಿದೆ

Highest Tax-Paying Celebs

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ (Shah Rukh Khan) ಅತೀ ಹೆಚ್ಚು ತೆರಿಗೆ ಪಾವತಿಸುವ ಭಾರತದ ಸೆಲೆಬ್ರಿಟಿಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. 2023-2024 ಆರ್ಥಿಕ ವರ್ಷದಲ್ಲಿ ಅವರು ಸರ್ಕಾರಕ್ಕೆ ಬರೋಬ್ಬರಿ 92 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ ಎಂದು ನಿಯತಕಾಲಿಕ ಫಾರ್ಚೂನ್ ಇಂಡಿಯಾ (Fortune India) ವರದಿ ಮಾಡಿದೆ (Highest Tax-Paying Celebs).

ಲಿಸ್ಟ್‌ನಲ್ಲಿ ಯಾರೆಲ್ಲ ಇದ್ದಾರೆ?

ಅತೀ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಬಾಲಿವುಡ್‌ ಕಲಾವಿದರು, ಕ್ರಿಕೆಟಿಗರು ಸೇರಿದ್ದಾರೆ. ಕಾಲಿವುಡ್‌ ನಟ ದಳಪತಿ ವಿಜಯ್‌ 80 ಕೋಟಿ ರೂ. ಪಾವತಿಸುವ ಮೂಲಕ ಅತೀಹೆಚ್ಚು ತೆರಿಗೆ ಪಾವತಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದಲ್ಲಿದ್ದಾರೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ 75 ಕೋಟಿ ರೂ. ಮೂಲಕ 3ನೇ ಸ್ಥಾನದಲ್ಲಿದ್ದಾರೆ.

ಟಾಟ್‌ 10ರಲ್ಲಿ ಸ್ಥಾನ ಪಡೆದವರು

ರ‍್ಯಾಂಕ್‌ಸೆಲೆಬ್ರಿಟಿತೆರಿಗೆ (ಕೋಟಿ ರೂ.ಗಳಲ್ಲಿ)
1ಶಾರುಖ್‌ ಖಾನ್‌92
2 ವಿಜಯ್‌80
3ಸಲ್ಮಾನ್‌ ಖಾನ್‌75
4ಅಮಿತಾಭ್‌ ಬಚ್ಚನ್‌ 71
5ವಿರಾಟ್‌ ಕೊಹ್ಲಿ66
6ಅಜಯ್‌ ದೇವಗನ್‌42
7ಎಂ.ಎಸ್‌.ಧೋನಿ38
8ರಣಬೀರ್‌ ಕಪೂರ್‌36
9ಹೃತಿಕ್‌ ರೋಷನ್‌28
10ಸಚಿನ್‌ ತೆಂಡೂಲ್ಕರ್‌28

ಇನ್ನು ಹಲವು ಬಾಲಿವುಡ್‌ ತಾರೆಯರಲ್ಲಿ ಟಾಪ್‌ 20ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಪಿಲ್‌ ಶರ್ಮಾ (26 ಕೋಟಿ ರೂ.), ಸೌರವ್‌ ಗಂಗೂಲಿ (23 ಕೋಟಿ ರೂ.), ಕರೀನಾ ಕಪೂರ್‌ (20 ಕೋಟಿ ರೂ.), ಶಾಹಿದ್‌ ಕಪೂರ್‌ (14 ಕೋಟಿ ರೂ.), ಹಾರ್ದಿಕ್‌ ಪಾಂಡ್ಯ (13 ಕೋಟಿ ರೂ.), ಕಿಯಾರಾ ಅಡ್ವಾಣಿ (12 ಕೋಟಿ ರೂ.) ಪಾವತಿಸಿದ್ದಾರೆ. ಇನ್ನು ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ಗಳಾದ ಮೋಹನ್‌ ಲಾಲ್‌ ಮತ್ತು ಅಲ್ಲು ಅರ್ಜುನ್‌ ತಲಾ 14 ಕೋಟಿ ರೂ. ಟ್ಯಾಕ್ಸ್‌ ಕಟ್ಟಿದ್ದಾರೆ. ಪಂಕಜ್‌ ತ್ರಿಪಾಠಿ ಮತ್ತು ಕತ್ರಿನಾ ಕೈಫ್‌ ತಲಾ 11 ಕೋಟಿ ರೂ. ಪಾವತಿಸಿದ್ದಾರೆ. ಈ ವರ್ಷ ಆಮೀರ್‌ ಖಾನ್‌ ಮತ್ತು ರಿಷಭ್‌ ಪಂತ್‌ ಅವರಿಂದ ತಲಾ 10 ಕೋಟಿ ರೂ. ಸಂದಾಯವಾಗಿದೆ.

ಈ ಸುದ್ದಿಯನ್ನೂ ಓದಿ: Deepika Padukone: ಕಪ್ಪು ಬಿಳುಪು ಫೋಟೋಗಳಲ್ಲಿ ಫಳಫಳ ಮಿಂಚಿದ ದೀಪಿಕಾ ಪಡುಕೋಣೆ ಬೇಬಿ ಬಂಪ್!‌

2023 ಶಾರುಖ್ ಪಾಲಿಗೆ ಗೋಲ್ಡನ್‌ ಇಯರ್‌

2023 ಶಾರುಖ್‌ ಖಾನ್‌ ಪಾಲಿಗೆ ಅಕ್ಷರಶಃ ಗೋಲ್ಡನ್‌ ಇಯರ್‌ ಆಗಿತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ಅವರ ಬ್ಯಾಕ್‌ ಟು ಬ್ಯಾಕ್‌ 3 ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಂಡ ʼಪಠಾಣ್‌ʼ ಮತ್ತು ನಯನತಾರಾ, ವಿಜಯ್‌ ಸೇತುಪತಿ ಜೊತೆ ನಟಿಸಿದ ʼಜವಾನ್‌ʼ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ 1,000 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದರೆ, ʼಡಂಕಿʼ ಸಿನಿಮಾ 470 ಕೋಟಿ ರೂ. ಗಳಿಸಿತ್ತು.