Wednesday, 18th September 2024

Kaun Banega Crorepati Season 16: 1 ಕೋಟಿ ರೂ. ಪ್ರಶ್ನೆಗೆ ಉತ್ತರಿಸಲು ವಿಫಲರಾದ ಬುಡಕಟ್ಟು ಸಮುದಾಯದ ಬಂಟಿ ವಡಿವಾ; ಈ ಪ್ರಶ್ನೆ ಏನಾಗಿತ್ತು ?

Kaun Banega Crorepati Season 16

ಕೌನ್ ಬನೇಗಾ ಕರೋಡ್ ಪತಿ ಸರಣಿ 16 (Kaun Banega Crorepati Season 16) ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದ್ದು, ಇತ್ತೀಚಿನ ಸಂಚಿಕೆಯಲ್ಲಿ ಬುಡಕಟ್ಟು ಸಮುದಾಯಕ್ಕೆ (tribal community) ಸೇರಿದ ಬಂಟಿ ವಡಿವಾ 1 ಕೋಟಿ ರೂಪಾಯಿಗಳ ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದರಿಂದ ಅವರು ಕೇವಲ 50 ಲಕ್ಷ ರೂ. ಮಾತ್ರ ಗೆಲ್ಲು ವಂತಾಯಿತು.

ಅಮಿತಾಬ್ ಬಚ್ಚನ್ (Amitabh Bachchan) ನಿರೂಪಣೆ ಮಾಡುತ್ತಿರುವ ಕೌನ್ ಬನೇಗಾ ಕರೋಡ್ ಪತಿ 16ನೇ ಸರಣಿ ಯಲ್ಲಿ ಸೆಪ್ಟೆಂಬರ್ 5ರಂದು ಬುಡಕಟ್ಟು ಸಮುದಾಯದ ಬಂಟಿ ವಡಿವಾ ಪಾಲ್ಗೊಂಡಿದ್ದರು.

1 ಕೋಟಿ ರೂ. ಗೆ ಬಂಗಾಳಿ ಶಿಲ್ಪಿ ಚಿಂತಾಮೋನಿ ಕರ್ ಬಗ್ಗೆ ಅಮಿತಾಬ್ ಬಚ್ಚನ್ ಬಂಟಿ ವಡಿವಾಗೆ ಕಠಿಣ ಪ್ರಶ್ನೆ ಯನ್ನು ಕೇಳಿದರು. ಆ ಪ್ರಶ್ನೆ ಹೀಗಿತ್ತು- 1948 ರಲ್ಲಿ ಬಂಗಾಳಿ ಶಿಲ್ಪಿ ಚಿಂತಾಮೋನಿ ಕರ್ ಅವರು ‘ದಿ ಸ್ಟಾಗ್’ ಎಂಬ ಕಲಾಕೃತಿ ಶೀರ್ಷಿಕೆಗಾಗಿ ಇವುಗಳಲ್ಲಿ ಯಾವುದನ್ನು ಗೆದ್ದರು?

ಇದಕ್ಕೆ ಆಯ್ಕೆಯಾಗಿ ಎ) ಪೈಥಾಗರಸ್ ಪ್ರಶಸ್ತಿ, ಬಿ) ನೊಬೆಲ್ ಪ್ರಶಸ್ತಿ, ಸಿ) ಒಲಿಂಪಿಕ್ ಪದಕ ಮತ್ತು ಡಿ) ಆಸ್ಕರ್ ಪ್ರಶಸ್ತಿ.

ಈ ಪ್ರಶ್ನೆಗೆ ಬಂಟಿ ವಡಿವಾ ಅವರಿಗೆ ಉತ್ತರಿಸಲು ಯಾವುದೇ ಜೀವ ಸೆಲೆ ಉಳಿದಿರಲಿಲ್ಲ. ಹೀಗಾಗಿ ಅವರು ಆಟವನ್ನು ತೊರೆಯಲು ನಿರ್ಧರಿಸಿದರು. ಇದರಿಂದ ಅವರೂ ಕೇವಲ 50 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುವುದನ್ನು ಆಯ್ಕೆ ಮಾಡಿಕೊಂಡರು.

ಅವರ ನಿರ್ಧಾರದ ಅನಂತರ ಅಮಿತಾಬ್ ಬಚ್ಚನ್ 1 ಕೋಟಿ ರೂ. ಪ್ರಶ್ನೆಗೆ ಸರಿಯಾದ ಉತ್ತರ ಒಲಿಂಪಿಕ್ ಪದಕ ಎಂದು ಬಹಿರಂಗಪಡಿಸಿದರು. ಬಂಟಿ ವಡಿವಾಗೆ ವಿದಾಯ ಹೇಳುವಾಗ ಬಿಗ್ ಬಿ ಕಠಿಣ ಪರಿಶ್ರಮ ಮತ್ತು ಸಮ ರ್ಪಣೆಗಾಗಿ ಅವರನ್ನು ಶ್ಲಾಘಿಸಿ ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.

ಕೌನ್ ಬನೇಗಾ ಕರೋಡ್ ಪತಿ ಸರಣಿ 16 2024ರ ಆಗಸ್ಟ್ 12ರಿಂದ ಸೋನಿ ಟಿವಿಯಲ್ಲಿ ಪ್ರಾರಂಭಿಸಲಾಗಿದೆ.

ಒಲಿಂಪಿಕ್ ಪದಕ ವಿಜೇತರಾದ ಮನು ಭಾಕರ್ ಮತ್ತು ಅಮನ್ ಸೆಹ್ರಾವತ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ದ್ದರು. ಅವರು ಈ ಸಂದರ್ಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿನ ತಮ್ಮ ಅನುಭವಗಳನ್ನು ಹಂಚಿ ಕೊಂಡಿದ್ದರು.

25 ಲಕ್ಷ ರೂ. ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದರು ಬೆಂಗಳೂರಿನ ಎಂಜಿನಿಯರ್

ಕೌನ್ ಬನೇಗಾ ಕರೋಡ್ ಪತಿಯ 16ನೇ ಸರಣಿಯಲ್ಲಿ ಬೆಂಗಳೂರು (bengaluru) ಮೂಲದ ಉತ್ಕರ್ಷ್ ಬಕ್ಸಿ ಅವರು ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಪಾಲ್ಗೊಂಡಿದ್ದು, ಇವರು ಪ್ರಾರಂಭದ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಆದರೆ 25 ಲಕ್ಷ ರೂ. ಮೌಲ್ಯದ ಮಹಾಭಾರತದ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲರಾಗಿದ್ದರು.

PM Modi: ಪ್ರಧಾನಿ ಮೋದಿ ನೂತನ ಎಸ್‌ಸಿಎ ಉದ್ಘಾಟಿಸುವ ಸಾಧ್ಯತೆ

ಜ್ಞಾನ ಮತ್ತು ಅದ್ಭುತ ಸಂಗೀತ ಪ್ರತಿಭೆಯಿಂದ ಬಿಗ್ ಬಿ ಮನ ಗೆದ್ದಿದ್ದ ಉತ್ಕರ್ಷ್ ಬಕ್ಸಿ 12.50 ಲಕ್ಷ ರೂ. ಗೆದ್ದ ಅನಂತರ ಮಹಾಭಾರತ ಕುರಿತಾದ 25 ಲಕ್ಷ ರೂ. ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆ ಮಹಾಭಾರತದ ಪ್ರಕಾರ ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ನೀಡಿದ ಮತ್ತು ಅದನ್ನು ಧರಿಸಿದವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಹೇಳಿದ ದೇವರು ಯಾರು ಎಂಬುದಾಗಿತ್ತು.

ಇದಕ್ಕೆ ಉತ್ತರ ಭಗವಾನ್ ಕಾರ್ತಿಕೇಯ ಆಗಿದ್ದರೂ ಉತ್ಕರ್ಷ್ ಇದಕ್ಕೆ ಉತ್ತರಿಸಲು ವಿಫಲರಾದರು. ಹೀಗಾಗಿ ಅವರು ಕೇವಲ 3.20 ಲಕ್ಷ ರೂ. ಅನ್ನು ಗೆಲ್ಲಲು ಮಾತ್ರ ಸಾಧ್ಯವಾ ಯಿತು.

Leave a Reply

Your email address will not be published. Required fields are marked *