Thursday, 26th December 2024

Keerthy Suresh: ಪಾಪರಾಜಿಗಳ ವಿರುದ್ಧ ಬೇಬಿ ಜಾನ್ ತಂಡ ಗರಂ; ಕೀರ್ತಿ ಸುರೇಶ್ ಶಾಕ್ ರಿಯಾಕ್ಷನ್- ವಿಡಿಯೊ ನೋಡಿ!

Keerthy Suresh

ಮುಂಬೈ: ನಟಿ ಕೀರ್ತಿ ಸುರೇಶ್ (Keerthy Suresh) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ನಟಿ  ಮದುವೆಯಾಗಿ ಒಂದು ವಾರ  ಕಳೆಯೋ ಮುನ್ನವೇ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಕೀರ್ತಿ ನಟನೆಯ ಬೇಬಿ ಜಾನ್ ಚಿತ್ರ ಇಂದು ರಿಲೀಸ್ ಆಗಿದ್ದು ಚಿತ್ರದ ಪ್ರೀಮಿಯರ್ ಸಂದರ್ಭ ಪಾಪರಾಜಿಗಳ ವಿರುದ್ಧ ಬೇಬಿ ಜಾನ್ ತಂಡ ಗರಂ ಆಗಿದ್ದು ಕೀರ್ತಿ ಸುರೇಶ್ ಶಾಕ್ ರಿಯಾಕ್ಷನ್ ಕೊಟ್ಟಿದ್ದಾರೆ! ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ನಟನೆಯ ಬೇಬಿ ಜಾನ್ ಚಿತ್ರ  ಇಂದು ಬಿಡುಗಡೆಯಾಗಿದ್ದು ನಟಿ ಕೀರ್ತಿ ಸುರೇಶ್ ಮುಂಬೈನಲ್ಲಿ   ಚಿತ್ರದ ಪ್ರೀಮಿಯರ್‌ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಪಾಪರಾಜಿ (‌ಸಿನಿಮಾ ಫೋಟೋಗ್ರಾಫರ್ಸ್)ಗಳ ವಿರುದ್ಧ ಬೇಬಿ ಜಾನ್ ತಂಡದ ಮಹಿಳೆಯೊಬ್ಬರು ಗರಂ ಆಗಿ‌ದ್ದಾರೆ. ಸಿನಿ ಇಂಡಸ್ಟ್ರಿಯಲ್ಲಿ ಈ ಪಾಪರಾಜಿಗಳು ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ಬಹಳಷ್ಟು ತಲೆ ನೋವಾಗುತ್ತಾರೆ. ಸೆಲೆಬ್ರಿಟಿಗಳ ಬೇರೆ ಬೇರೆ ಭಂಗಿಗಳನ್ನು ಕ್ಲಿಕ್ಕಿಸಿ  ಪೋಟೊ ವೈರಲ್ ಮಾಡುತ್ತಾರೆ. ನಟಿ ಕೀರ್ತಿ ಸುರೇಶ್  ಕೂಡ ಪಾಪಾರಾಜಿಗಳ ವರ್ತನೆಗೆ ಶಾಕ್ ಆಗಿದ್ದಾರೆ.

ಕೀರ್ತಿ ಸುರೇಶ್ ತನ್ನ ಕಾರನ್ನು ಹತ್ತುತ್ತಿದ್ದ ಸಂದರ್ಭ ಪಾಪರಾಜಿಗಳು ಸುತ್ತುವರಿದು ಪೋಟೊ ಕ್ಲಿಕ್ಕಿಸುತ್ತಾರೆ. ಈ ಸಂದರ್ಭ ಚಿತ್ರದ ತಂಡದ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ ಐಸೆ ಕ್ಯೂ ಲೇ ರಹೇ ಹೋ?  ಅವರು ಕಾರಿನ  ಒಳಗೆ ಬರುತ್ತಿದ್ದಾರೆ ಅಲ್ಲವೇ?  ಐಸೆ ಅಜೀಬ್ ಕೈಸೇ ಲೇ ರಹೇ ಹೋ?  ಕ್ಯು ಕಾರ್ ಕೆ ಅಂದರ್ ಲೇ ರಹೇ ನೋ, ಮತ್ ಲೋ ನಾ, ಅವರು ಕಾರು  ಹತ್ತುತ್ತಿರುವಾಗ ನೀವು ಯಾಕೆ ಹೀಗೆ ಮಾಡುತ್ತಿದ್ದೀರಿ? ನೀವು ಇಂತಹ ಆಕ್ಷೇಪಾರ್ಹ ವೀಡಿಯೊವನ್ನು ಹೇಗೆ ಕ್ಲಿಕ್ ಮಾಡು‌ತ್ತಿದ್ದೀರಿ?  ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ  ಏನಾಯಿತು ಎಂದು ಕೀರ್ತಿ  ಸುರೇಶ್  ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ.

ಅಭಿಮಾನಿಗಳು ಗರಂ

ಈ ರೀತಿ ಅನುಮತಿಯಿಲ್ಲದೆ ಫೋಟೋಗಳನ್ನು ತೆಗೆಯುವವರ ವಿರುದ್ಧ ಬಳಕೆದಾರರು ಕೂಡ ಗರಂ ಆಗಿದ್ದಾರೆ.ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಫೋಟೋಗ್ರಾಫರ್ ನಿಜವಾಗಿಯೂ ನಾನ್ಸೆನ್ಸ್, ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ ಎಂದು ಕಾಮೆಂಟ್  ಮಾಡಿದ್ದಾರೆ. ಇನ್ನು ಕೆಲವು ಬಳಕೆದಾರರು ಭಾರತೀಯ ಪಾಪರಾಜಿಗಳಿಗೆ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ, ಇತ್ತೀಚಿನ ದಿನಗಳಲ್ಲಿ ಈ ಫೋಟೋಗ್ರಾಫರ್‌ಗಳು ವಿಚಿತ್ರವಾದ ಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ, ಖಾಸಗಿ ಭಾಗಗಳನ್ನು ಜೂಮ್ ಮಾಡುತ್ತಾರೆ, ಅದು ಸರಿಯಲ್ಲ  ಎಂದಿದ್ದಾರೆ.

ನಟಿ ಕೀರ್ತಿ ಪ್ರಸ್ತುತ  ಬೇಬಿ ಜಾನ್’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದು  ಮೊದಲ ಬಾರಿಗೆ ವರುಣ್ ಧವನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ತಮಿಳಿನ ತೇರಿ ಸಿನಿಮಾ ರಿಮೇಕ್ ಆಗಿದ್ದು ಚಿತ್ರದಲ್ಲಿ ವಮಿಕಾ , ಜಾಕಿ ಶ್ರಾಫ್ ಮತ್ತು ರಾಜ್ಪಾಲ್ ಯಾದವ್ ಇತ್ಯಾದಿ ನಟ  ನಟಿಯರು ಅಭಿನಯಿಸಿದ್ದಾರೆ. ಚಿತ್ರ ಇಂದು ಬಿಡುಗಡೆಯಾಗಿದ್ದು ಅಭಿಮಾನಿಗಳು ಚಿತ್ರದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: ಕುಟುಂಬದ ಕೀರ್ತಿ ಬೆಳಗುತ್ತಿರುವ ’ಸೂರಜ್, ಪ್ರಜ್ವಲ್’