Wednesday, 27th November 2024

BBK 11: ಮಹಾರಾಜ-ಯುವರಾಣಿ ಮಧ್ಯೆ ಮಾತಿನ ಯುದ್ಧ: ರಣರಂಗವಾದ ಬಿಗ್ ಬಾಸ್ ಮನೆ

Mokshitha Gowthami and Manju

ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯವಾಗಿ ಬದಲಾಗಿದೆ. ಈವರೆಗೆ ವಾರದ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದಾರೆ. ಆದರೀಗ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್​​​ ಬಾಸ್ ಮನೆಯ ಬಿಗ್ ​ಬಾಸ್ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್​ಗೆ ಬ್ರೇಕ್ ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ. ಯಾಕೆಂದರೆ ಮನೆಗೆ ಈಗ ಯುವರಾಣಿಯ ಆಗಮನವಾಗಿದೆ. ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರ ಮಂಜು ಅವರು ರಾಜನಾಗಿದ್ದರು. ಈಗ ಇವರಿಗೆ ವಿರೋಧಿ ಬಣ ಒಂದು ಹುಟ್ಟಿಕೊಂಡಿದೆ. ಯುವರಾಣಿ ಆಗಿ ಮೋಕ್ಷಿತಾ ಪೈ ಎಂಟ್ರಿಕೊಟ್ಟಿದ್ದಾರೆ. ಸಾಮ್ರಾಜ್ಯಕ್ಕಾಗಿ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಇಡೀ ಮನೆ ಇಬ್ಭಾಗವಾಗಿದೆ. ಯುವರಾಣಿಯ ಆಗಮನ ಆಗಿರೋದ್ರಿಂದ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮಹಾರಾಜನ ಕುರ್ಚಿಗೆ ಕಂಟಕ ಎದುರಾಗಿದೆ. ಇದರಿಂದ ದೊಡ್ಮನೆ ರಣರಂಗವಾಗಿದೆ.

ಮೋಕ್ಷಿತಾ ಹಾಗೂ ಮಂಜು ನಡುವೆ ಬೆಂಕಿ ಬಿದ್ದಂತಿದೆ. ಗೋಲ್ಡ್‌ ಸುರೇಶ್‌ ಅವರು ಮಹಾರಾಣಿ ಆಜ್ಞೆಯಂತೆ ಯುವರಾಣಿ ನೋಡಿದಾಗ ತಲೆ ತಗ್ಗಿಸಬೇಕು ಎಂದು ಹೇಳಿದ್ದಾರೆ. ಅದಕ್ಕೆ ಗೌತಮಿ ಅವರು ಆಗೋದಿಲ್ಲ. ಯಾರು ಅಂತ ತಲೆ ತಗ್ಗಿಸಲಿ? ತಲೆ ತಗ್ಗಿಸಿದ ದಿನ ಅವರನ್ನು ಒಪ್ಪಿಕೊಂಡಂತೆ ಎಂದಿದ್ದಾರೆ.

ಇತ್ತ ಮಂಜು ಅವರು ಮೋಕ್ಷಿತಾ ಅವರ ಬಗ್ಗೆ ಗೇಲಿ ಮಾಡಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿಕೊಂಡು, ನರಿಯ ಕಣ್ಣೀರು ಹಾಕಿ ಆಡಿದ್ದು ಆಟವಲ್ಲ. ನಾನು ಕೊಟ್ಟಿರುವ ಭಿಕ್ಷೆ ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ಮೋಕ್ಷಿತಾ ನೀವು ಕೊಟ್ಟಿದ್ದಲ್ಲ ಬಿಗ್​ ಬಾಸ್​ ಕೊಟ್ಟಿರೋ ಭಿಕ್ಷೆ ಅಂತ ಜೋರಾಗಿ ಕಿರುಚಾಡಿದ್ದಾರೆ. ಒಟ್ಟಾರೆ ಯುವರಾಜ-ಯುವರಾಣಿ ಆಳ್ವಿಕೆಯಲ್ಲಿ ದೊಡ್ಮನೆ ಹೊತ್ತಿ ಉರಿದಿದೆ.

BBK 11: ಸುದೀಪ್ ಅಷ್ಟು ಹೇಳಿದ್ರೂ ಸುಧಾರಿಸಿಕೊಳ್ಳದ ಸ್ಪರ್ಧಿಗಳು: ಏನಾಗುತ್ತೆ ಈ ವೀಕೆಂಡ್?