Thursday, 12th December 2024

ದಿ.ಚಿರಂಜೀವಿ ಸರ್ಜಾ 39ನೇ ಹುಟ್ಟುಹಬ್ಬ ಇಂದು

ಬೆಂಗಳೂರು: ಸ್ಯಾಂಡಲ್ ವುಡ್ ನಟ, ದಿ.ಚಿರಂಜೀವಿ ಸರ್ಜಾ ಅವರ 39ನೇ ವರ್ಷದ ಹುಟ್ಟುಹಬ್ಬ ಇಂದು. ಚಿರು ನಿಧನದ ನಂತರ ಅವರ ಮೊದಲ ಜನ್ಮದಿನವಾಗಿದೆ.

ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನೆಲಗುಳಿಗ್ರಾಮದ ಬೃಂದಾವನ ಫಾರ್ಮ್ ಹೌಸ್’ನಲ್ಲಿ ಕುಟುಂಬಸ್ಥರು ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಚಿರು ಇಲ್ಲದ ನೋವಿನಲ್ಲಿಯೂ ಅವರ ಕುಟುಂಬ ಖುಷಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದು, ಚಿರು ಪತ್ನಿ, ತುಂಬು ಗರ್ಭಿಣಿ ಮೇಘನಾ ಸಾಮಾಜಿಕ ಜಾಲತಾಣಗಳಲ್ಲಿ ‘ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ ಎಂದು ಬರೆದುಕೊಂಡಿದ್ದಾರೆ.