Thursday, 12th December 2024

BBK 11: ಉಗ್ರಂ ಮಂಜು ಮುಂದೆ ಲಾಯರ್ ಜಗದೀಶ್ ಉಗ್ರ ರೂಪ: ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ಜಗಳ

Ugram Manju vs Lawyer Jagadish

ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಶುರುವಾಗಿ ಎರಡು ದಿನಗಳು ಕಳೆದಿದ್ದು ಕೆಲ ಸಣ್ಣ-ಪುಟ್ಟ ಜಗಳಗಳು, ಮಾತುಕತೆಗಳು ನಡೆದಿವೆ. ಇಂದು ಮನೆ ನಗೆಯ ಅಲೆಯಲ್ಲಿ ತೇಲಲಿದೆ ಎಂದು ನಂಬಲಾಗಿತ್ತು. ಆದರೀಗ ಕಲರ್ಸ್ ಕನ್ನಡ ಬಿಟ್ಟಿರುವ ಹೊಸ ಪ್ರೊಮೋ ಅಭಿಮಾನಿಗಳಲ್ಲಿ ರೋಚಕತೆ ಸೃಷ್ಟಿಸಿದೆ. ಮೊದಲ ಎರಡು ದಿನ ಚಿಕ್ಕ-ಪುಟ್ಟ ಕಿರಿಕ್ ಮಾಡಿಕೊಂಡಿದ್ದ ಲಾಯರ್ ಜಗದೀಶ್ (Lawyer Jagadish) ಇಂದು ಉಗ್ರ ರೂಪ ತಾಳಿದ್ದಾರೆ. ಮೀಸೆ ಇರೋ ಯಾರೇ ಇರಬಹುದು, ಇದುವರೆಗೆ ಅವರನ್ನ ಬಿಟ್ಟಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಹೌದು, ಇಂದು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ನಿರೀಕ್ಷಿಸಲಾಗಿದೆ. ಬೆಳಗ್ಗೆಯೇ ಬಿಡುಗಡೆ ಮಾಡಿದ ಒಂದು ಪ್ರೊಮೋದಲ್ಲಿ ಧನರಾಜ್ ಆಚಾರ್ ಮತ್ತು ಲಾಯರ್ ಜಗದೀಶ್ ನಡುವೆ ಸಣ್ಣ ಕಿಡಿ ಹತ್ತಿತ್ತು. ಆದರೀಗ ಬಂದಿರುವ ಮತ್ತೊಂದು ಪ್ರೊಮೋದಲ್ಲಿ ಮನೆಯ ಎಲ್ಲ ಸದಸ್ಯರನ್ನು ಜಗದೀಶ್ ಅವರು ಎದುರು ಹಾಕಿಕೊಂಡಂತಿದೆ.

ಉಗ್ರಂ ಮಂಜು ಮತ್ತು ಜಗದೀಶ್ ನಡುವೆ ದೊಡ್ಡ ಗಲಾಟೆ ನಡೆದಂತಿದೆ. ಇಬ್ಬರು ಜಗಳವಾಡುತ್ತಾ ಪರಸ್ಪರ ಮುಖಾಮುಖಿ ಆಗಿರುವುದು ಪ್ರೊಮೋದಲ್ಲಿದೆ. ಹಾಗೆಯೆ ನರಕವಾಸಲ್ಲಿರುವ ರಂಜಿತ್ ತೊಡೆ ತಟ್ಟಿ ಜಗದೀಶ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆಲ್ಲ ಕ್ಯಾರೇ ಎನ್ನದ ಲಾಯರ್ ‘ಮುಖವಾಡ ಹಾಕ್ಕೊಂಡು ಜೀವನ ಮಾಡ್ತಿದ್ದಾರೆ ಅಲ್ಲಿ. ಒಬ್ಬ 16 ಜನರನ್ನು ಡಿಫೆಂಡ್ ಮಾಡುತ್ತಾನೆ. ಮೀಸೆ ತಿರ್ಗೋನು ಯಾರೇ ಆಗಿರ್ಬೋದು, ಇದುವರೆಗೆ ಬಿಟ್ಟಿಲ್ಲ. ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗೇ ಇದೆ. ನನಗೆ ನಾನೇ ಬಿಗ್ ​ಬಾಸ್. ನೀವೆಲ್ಲ ಸೇರಿ ನನ್ನನ್ನು ಹೊರಗೆ ಕಳಿಸೋದೇ ಬೆಸ್ಟ್’ ಎಂದು ಲಾಯರ್ ಜಗದೀಶ್ ಗುಡುಗಿದ್ದಾರೆ.

ಧನ​ರಾಜ್-ಜಗದೀಶ್ ಫೈಟ್:

ನಾಮಿನೇಷನ್​ನಿಂದ ಬಚಾವ್ ಆಗಲು ಬಿಗ್ ಬಾಸ್ ಟಾಸ್ಕ್ ಕೊಟ್ಟಾಗ ರೆಫ್ರಿ ಧನರಾಜ್ ಆಚಾರ್ ಮತ್ತು ಜಗದೀಶ್ ನಡುವೆಯೂ ಜಗಳ ಆಗಿದೆ. ನೀನು ರೆಫ್ರಿ ಆಗಲು ಫಿಟ್ ಇಲ್ಲ, ಕಾಮಿಡಿ ಪೀಸ್ ತರ ಆಡ್ತಾನೆ ಎಂದು ಜಗದೀಶ್ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಧನರಾಜ್ ಏಯ್, ಸುಮ್ನೆ ಕೋತ್ಕೊತಿಯಾ, ಇವನು ಯಾರು ಹೇಳೋಕೆ ಎಂದು ಸಿಟ್ಟಾಗಿದ್ದಾರೆ. ಇದಾದ ಬಳಿಕ ಧನರಾಜ್ ಆಚಾರ್ ಬೇಸರದಿಂದ ಕನ್ಫೆಷನ್ ರೂಮ್​ನಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

BBK 11: ಕಷ್ಟ ಅನಿಸ್ತಿದೆ ಬಿಗ್ ಬಾಸ್: ಕನ್ಫೆಷನ್ ರೂಮ್​ಗೆ ಬಂದು ಗಳಗಳನೆ ಅತ್ತ ಧನರಾಜ್ ಆಚಾರ್