Saturday, 14th December 2024

ಶಾರೂಖ್​ ಖಾನ್​ ಪುತ್ರ ಆರ್ಯನ್ ಖಾನ್’ಗೆ ಎನ್‌ಸಿಬಿ ಡ್ರಿಲ್

ನವದೆಹಲಿ: ಐಷಾರಾಮಿ ಹಡಗೊಂದರಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 08 ಮಂದಿಯನ್ನು ಬಂಧಿ ಸಿದ್ದು, ಬಾಲಿವುಡ್​ ಬಾದ್​ ಷಾ, ಶಾರೂಖ್​ ಖಾನ್​ ಪುತ್ರ ಆರ್ಯನ್ ಖಾನ್​​ನನ್ನೂ ವಿಚಾರಣೆ ನಡೆಸುತ್ತಿದ್ದಾರೆ.

ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಹಡಗೊಂದರ ಒಳಗೆ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್​​ಸಿಬಿ) ಅಧಿಕಾರಿಗಳು ದಾಳಿ ನಡೆಸಿ ಕೊಕೇನ್, ಹಶೀನ್ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಮೇಲೆ ಎನ್​ಸಿಬಿ ದಾಳಿ ನಡೆಸಿದೆ.

ದಾಳಿಯಲ್ಲಿ ಮೂವರು ಮಹಿಳೆಯರು ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಮಹಿಳೆಯರು ದೆಹಲಿ ಮೂಲದವರು ಎನ್ನಲಾಗುತ್ತಿದೆ. ಜೊತೆಗೆ ಮುಂಬೈ ರೇವ್ ಪಾರ್ಟಿ ಆಯೋಜಕರಿಗೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.