Sunday, 15th December 2024

ಕೊರೋನಾ ಜಾಗೃತಿ ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಧ್ವನಿ ಬೇಡ: ಜ.18ಕ್ಕೆ ವಿಚಾರಣೆ

ನವದೆಹಲಿ: ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿ ತೆಗೆದು ಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಹೇಳಿಕೊಂಡಿರುವ ರಾಕೇಶ್ ಅರ್ಜಿ ಸಲ್ಲಿಸಿದ್ದಾರೆ.

ರಾಕೇಶ್​ ಅವರು, ಅಮಿತಾಭ್​ ಅವರಿಗೆ ಈ ಧ್ವನಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಶುಲ್ಕ ಪಾವತಿಸುತ್ತದೆ. ರಾಷ್ಟ್ರಕ್ಕೆ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಕೆಲವು ಕರೊನಾ ವಾರಿಯರರ್ಸ್​ ಅನ್ನು ನಿರ್ಲಕ್ಷಿಸಿ ಅಮಿತಾಭ್​ ಅವರಿಗೆ ಹಣ ನೀಡುವ ಮೂಲಕ ಈ ರೀತಿ ಜಾಗೃತಿ ಮೂಡಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಕರೊನಾದ ಈ ಸಮಯದಲ್ಲಿ ಕೋವಿಡ್​ ವಾರಿಯರ್ಸ್​ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕೆಲವು ಕರೊನಾ ವಾರಿಯರ್ಸ್​ ತಮ್ಮ ದುಡಿಮೆಯ ಹಣವನ್ನು ಅಗತ್ಯ ಇರುವವರಿಗೆ ನೀಡುತ್ತಿದ್ದಾರ. ಇಂಥವರಿಗೆ ನೆರವಾಗುವ ಬದಲು ನಟನಿಗೆ ಈ ರೀತಿ ಶುಲ್ಕವನ್ನು ಪಾವತಿಸುವುದು ಸರಿಯಲ್ಲ. ಆದರೆ ನಟ ಅಮಿತಾಭ್​ ಸಮಾಜ ಸೇವಕರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿಲ್ಲ, ಇವರು ಕರೊನಾ ವಾರಿಯರ್ಸ್​ ಅಲ್ಲ. ಆದ್ದರಿಂದ ಅವರ ಧ್ವನಿ ಏಕೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಅರ್ಜಿದಾರರ ಪರವಾಗಿ ವಕೀಲರಾದ ಎ.ಕೆ. ದುಬೆ ಮತ್ತು ಪವನ್ ಕುಮಾರ್ ವಾದ ಮಂಡಿಸುತ್ತಿದ್ದಾರೆ. ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ವಿಚಾರಣೆ ಯನ್ನು ಕೋರ್ಟ್​ ಜನವರಿ 18ಕ್ಕೆ ಮುಂದೂಡಿದೆ.