Sunday, 8th September 2024

‘ಪೊಗರು’ ಧ್ರುವ ಸರ್ಜಾಗೆ 32ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ‘ಪೊಗರು’ ಧ್ರುವ ಸರ್ಜಾ ಅವರಿಗೆ ಮಂಗಳವಾರ 32ನೇ ಜನ್ಮದಿನದ ಸಂಭ್ರಮ.

ಪೊಗರು ಚಿತ್ರದ ಶೂಟಿಂಗ್ ಸೆಟ್ ನಲ್ಲಿ ವಿಶೇಷ ದಿನ ಕಳೆಯಲಿದ್ದು, ಬಾಕಿ ಇರುವ ಇಂಟ್ರೋ ಸಾಂಗ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ.

ನಾನು ಈ ವರ್ಷ ತಮ್ಮ ಜನ್ಮದಿನ ಆಚರಿಸಲು ಬಯಸುವುದಿಲ್ಲ ಎಂದು ಸಾಮಾಜಿಕ ಜಾಲತಾಣ ದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಅಭಿಮಾನಿಗಳು ತಮ್ಮ ಮನೆಯ ಮುಂದೆ ಸೇರದಂತೆಯೂ ಮನವಿ ಮಾಡಿದ್ದಾರೆ.

ಪೊಗರು ಚಿತ್ರತಂಡ ನಟನ ಜನ್ಮದಿನದಂದು ಚಿತ್ರದ ಹೊಸ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿದೆ. ನಂದ ಕಿಶೋರ್ ನಿರ್ದೇಶನದ ಈ ಚಿತ್ರವು ಎರಡು ದಿನಗಳಲ್ಲಿ ಟ್ರ್ಯಾಕ್‌ನ ಶೂಟಿಂಗ್ ಪೂರ್ಣಗೊಳಿಸಲಿದೆ. ಬಿ.ಕೆ.ಗಂಗಾಧರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್‌ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಮಯೂರಿ, ರವಿಶಂಕರ್, ಚಿಕ್ಕಣ್ಣ, ಮತ್ತು ಕುರಿ ಪ್ರತಾಪ್, ಬಾಡಿಬಿಲ್ಡರ್‌ಗಳಾದ ಕೈ ಗ್ರೀನೆ, ಮೋರ್ಗನ್ ಅಸ್ಟೆ, ಜೋಹಾನ್ ಲ್ಯೂಕಾಸ್ ಮತ್ತು ಜೋ ಲಿಂಡರ್ ಚಿತ್ರದಲ್ಲಿ ದ್ದಾರೆ.

Leave a Reply

Your email address will not be published. Required fields are marked *

error: Content is protected !!