Thursday, 12th December 2024

ಸಿಸಿಬಿ ವಿಚಾರಣೆಗೆ ರಾಧಿಕಾ ಕುಮಾರಸ್ವಾಮಿ ಹಾಜರು

ಬೆಂಗಳೂರು : ಯುವರಾಜ್ ಅಕೌಂಟ್ ನಿಂದ ಕೋಟ್ಯಾಂತರ ರೂಪಾಯಿ ವರ್ಗಾವಣೆ ಆರೋಪದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಶುಕ್ರವಾರ ಸಿಸಿಬಿ ವಿಚಾರಣೆಗೆ ಹಾಜರಾದರು.

ಯುವರಾಜ್ ನಟಿ ರಾಧಿಕಾ ಅಕೌಂಟ್ ಗೆ ಕೋಟ್ಯಾಂತರ ರೂ. ಹಣ ವರ್ಗಾವಣೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ರಾಧಿಕಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಈ ಹಿನ್ನೆಲೆ ಯಲ್ಲಿ ಇಂದು ರಾಧಿಕಾ ವಿಚಾರಣೆಗೆ ಹಾಜರಾಗಿದ್ದಾರೆ.