Sunday, 15th December 2024

24ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಯೇಶಾ ಸೈಗಲ್

ಮುಂಬೈ: ನಟಿ ಸಯೇಶಾ ಸೈಗಲ್ ಗುರುವಾರ ತಮ್ಮ 24ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡರು. ಸಯೇಶಾ 2015ರಲ್ಲಿ ‘ಅಖಿಲ್’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು.

ನಂತರ ಅಜಯ್ ದೇವಗನ್ ನಟನೆಯ ‘ಶಿವಾಯ್’ ಸಿನಿಮಾದಲ್ಲಿ ಅಭಿನಯಿಸಿದರು. ತಮಿಳು ಚಿತ್ರರಂಗದಲ್ಲೇ ಸಾಕಷ್ಟು ಸಕ್ರಿಯ ರಾಗಿದ್ದಾರೆ. ನಟಿ ಸಯೇಶಾ ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ‘ಯುವರತ್ನ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರು ಹಾಗೂ ಅವರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.