Thursday, 26th December 2024

BBK 11: ಬಿಗ್ ಬಾಸ್​ನಲ್ಲಿ ಮೆಗಾ ಟ್ವಿಸ್ಟ್: ಇಂದು ಮನೆಯಿಂದ ಹೊರಬರಲಿದ್ದಾರೆ ಈ ಸ್ಪರ್ಧಿ

Shishir Shobha and Aishwarya

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಒಂಬತ್ತನೇ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಭಾನುವಾರದ ಎಪಿಸೋಡ್ ಅನ್ನು ಅಂತಿಮ ಹಂತದಲ್ಲಿ ಕೊನೆಗೊಳಿಸಿದ್ದು ಇಂದು ಮುಂದುವರೆಯಲಿದೆ. ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಡೇಂಜರ್ ಝೋನ್​ನಲ್ಲಿದ್ದಾರೆ. ಆದರೆ, ಇವರಿಬ್ಬರೂ ಇಂದು ಮನೆಯಿಂದ ಔಟ್ ಆಗುತ್ತಿಲ್ಲ.

ಮೂಲಗಳ ಪ್ರಕಾರ, ನಿನ್ನೆಯ ಮುಂದುವರೆದ ಸಂಚಿಕೆ ಇಂದು ಪ್ರಸಾರವಾಗಲಿದ್ದು, ಎಲಿಮಿನೇಟ್ ಆಗುವ ಸ್ಪರ್ಧಿ ಐಶ್ವರ್ಯಾ ಅಥವಾ ಶಿಶಿರ್ ಅಲ್ಲ. ಬದಲಾಗಿ ಶೋಭಾ ಶೆಟ್ಟಿ ಮನೆಯಿಂದ ವಾಕ್ ಔಟ್ ಆಗಲಿದ್ದಾರೆ. ಕನ್ನಡ ಬಿಗ್ ​ಬಾಸ್​ಗೆ ಶಾಕಿಂಗ್​ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಶೋಭಾ ಮೊದಲ ದಿನವೇ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಅದರಲ್ಲೂ ಬಿಗ್​ ಬಾಸ್​ ಕೊಟ್ಟ ಟಾಸ್ಕ್​ ಆಡುವಾಗ ಕೊನೆಯ ಕ್ಷಣದಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಇದೇ ಟಾಸ್ಕ್​ ಆಡುವಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದರು.

ಅಲ್ಲಿಂದ ಕೊಂಚ ಡಲ್ ಆದ ಶೋಭಾ ಟಾಸ್ಕ್​ನಲ್ಲಿ ಮತ್ತೆ ಕತ್ತು ನೋವು ಮಾಡಿಕೊಂಡಿದ್ದರು. ಇದಾದ ಬಳಿಕ ಅವರ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು. ಆದರೆ ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪನ ಕಾರ್ಯಕ್ರಮದಲ್ಲಿ ಏಕಾಏಕಿ ಸರ್​ ನನಗೆ ಇಲ್ಲಿ ಇರೋದಕ್ಕೆ ಆಗುತ್ತಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.

ಕಿಚ್ಚ ಸುದೀಪ್ ಅನೇಕ ಬಾರಿ ಅರ್ಥ ಮಾಡಿಸುವ ಪ್ರಯತ್ನ ಪಟ್ಟರೂ ಶೋಭಾ ಕನ್ವೆನ್ಸ್ ಆಗಲಿಲ್ಲ. ಅಂತಿಮವಾಗಿ ಹೊರಗಡೆ ಹೋಗಬೇಕಾ ಎಂದು ಕೈ ತೋರಿಸುತ್ತ ದೊಡ್ಡ ಧ್ವನಿಯಲ್ಲಿ ಕಿಚ್ಚ ಸುದೀಪ್ ಶೋಭಾಗೆ ಪ್ರಶ್ನಿಸಿದ್ದಾರೆ. ನಿನಗಾಗಿ ಡೋರ್ ಓಪನ್ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಾ ಮನೆಯಿಂದ ಔಟ್ ಆಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಇವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದು ಇಂದಿನ ಸಂಚಿಕೆಯಲ್ಲಿ ಟೆಲಿಕಾಸ್ಟ್ ಆಗಲಿದೆ.

BBK 11: ಗೌತಮಿ ಮೇಲೆ ಗರಂ ಆದ ಸುದೀಪ್: ಮೋಕ್ಷಿತಾ, ಮಂಜುಗೂ ಭರ್ಜರಿ ಕ್ಲಾಸ್ ತೆಗೆದುಕೊಂಡ ಕಿಚ್ಚ