ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎಂಟನೇ ವಾರ ನಡೆಯುತ್ತಿದೆ. 50 ದಿನ ಪೂರೈಸಿರುವ ಹಿನ್ನಲೆಯಲ್ಲಿ ಮನೆಯೊಳಗೆ ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದರು. ಬಂದ ದಿನವೇ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಶೋಭಾ ನಡುಕ ಹುಟ್ಟಿಸಿದ್ದರು. ಅದರಲ್ಲೂ ತಂಡದ ನಾಯಕರಾಗಲು ಯಾರು ಅರ್ಹರು ಹಾಗೂ ಯಾರು ಅನರ್ಹರು ಟಾಸ್ಕ್ ವೇಳೆ ಶೋಭಾ ಹಾಗೂ ಮಂಜು ಮಧ್ಯೆ ದೊಡ್ಡ ಗಲಾಟೆ ನಡೆದಿತ್ತು. ಆದರೀಗ ಇವರಿಬ್ಬರು ತುಂಬಾ ಕ್ಲೋಸ್ ಆಗಿದ್ದಾರೆ.
ಮೊನ್ನೆಯಷ್ಟೆ ಮಂಜು ಅವರು ಶೋಭಾ ಬಗ್ಗೆ ಮಾತನಾಡುತ್ತಾ, ರೂಲ್ಸ್ ಅಂಡ್ ರೆಗ್ಯೂಲೇಷನ್ ಏನು ಇರುತ್ತೋ ಅದನ್ನ ಎಲ್ಲೋ ಅಲ್ಲಾಡ್ಸಿದ್ದು ಎಂದಿದ್ದಾರೆ. ಮಂಜು ಅವರ ಅಲ್ಲಾಡ್ಸಿದ್ದು ಅನ್ನೋ ಮಾತಿಗೆ ಶೋಭಾ ಅವರು ಕೆರಳಿ ಕೆಂಡಲವಾಗಿ, ಅಲ್ಲಾಡಿಸೋದಿಕ್ಕೆ ಗಿಲ್ಲಾಡಿಸೋದಿಕ್ಕೆ ವಾಟ್.. ಕಾರಣದಲ್ಲಿ ಕ್ಲ್ಯಾರಿಟಿನೇ ಇಲ್ಲ ಎಂದು ಶೋಭಾ ಶೆಟ್ಟಿ ಮಾತಿನ ಚಾಟಿ ಬೀಸಿದ್ದರು. ಇದಾದ ಕೆಲವೇ ಹೊತ್ತಲ್ಲಿ ಇವರಿಬ್ಬರ ಮಧ್ಯೆ ರಾಜಿ ಆಗಿದೆ.
ಟಾಸ್ಕ್ ವಿಚಾರ ಬಂದಾಗ ಶೋಭಾ ಅವರೇ ಮಂಜು ಬಳಿ ಬಂದು ರಾಜಿ ಮಾಡಿಕೊಂಡಿದ್ದಾರೆ ಮತ್ತು ತಮ್ಮದೇ ತಂಡಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ. ಮಂಜು ಅವರೇ ಟಾಸ್ಕ್ ವಿಚಾರ ಬೇರೆಯದೇ ಲೆಕ್ಕ. ಉಳಿದ ವಿಚಾರಗಳನ್ನು ಪಕ್ಕಕ್ಕೆ ಇಡಲೇಬೇಕು. ಹೀಗಾಗಿ, ನೀವು ನನ್ನ ತಂಡಕ್ಕೆ ಬನ್ನಿ ಎಂದು ಕೋರಿದರು ಶೋಭಾ. ಅತ್ತ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದ ಕಾರಣ ಮಂಜುಗೆ ಬೇರೆ ಆಯ್ಕೆ ಇರದೆ ಇವರ ತಂಡ ಸೇರಿಕೊಂಡಿದ್ದಾರೆ.
ಇದಕ್ಕೂ ಮುನ್ನ ಶೋಭಾ ಹಾಗೂ ಗೌತಮಿ ನಡುವೆಯೂ ಕ್ಲ್ಯಾಶ್ ಆಗಿತ್ತು. ನಿಮ್ಮ ಮುಖವಾಡ ಕಳಚುತ್ತೀನಿ ಅಂತ ಭಯ ಪಡುತ್ತಿದ್ದೀರಾ?. ನಿಮ್ಮಲ್ಲಿ ಪಾಸಿಟಿವ್ ಇಲ್ವೇ ಇಲ್ಲ, ಇರೋದೆಲ್ಲ ನೆಗೆಟಿವ್ ಎಂದು ಗೌತಮಿಗೆ ನೇರವಾಗಿ ಶೋಭಾ ಹೇಳಿದ್ದರು. ಆದರೆ, ಮಂಜು ಬಳಿಕ ಶೋಭಾ ಅವರು ಗೌತಮಿ ಜೊತೆಗೂ ಮಾತನಾಡಿ ತನ್ನ ತಂಡ ಸೇರಿಕೊಳ್ಳಿ ಎಂದಿದ್ದಾರೆ. ಕೊನೆಗೂ ಮಂಜು ಹಾಗೂ ಗೌತಮಿ ಅವರು ಶೋಭಾ ತಂಡಕ್ಕೆ ಸೇರಿಕೊಂಡಿದ್ದು, ಫುಲ್ ಕ್ಲೋಸ್ ಆಗಿದ್ದಾರೆ.
BBK 11: ಚೈತ್ರಾ ಚಾಲಾಕಿತನ ಕಂಡು ಶಾಕ್ ಆದ ಸ್ಪರ್ಧಿಗಳು: ಯಪ್ಪಾ.. ಏನು ಮಾಡಿದ್ರು ನೋಡಿ