Saturday, 27th July 2024

ಮುಂದಿನ ಏಳು ಜನ್ಮಗಳಲ್ಲಿ ನೀವು ನನ್ನವರು: ವಿಕ್ಕಿ ಕೌಶಲ್ ಅಭಿಮಾನಿ

ಹೈದರಾಬಾದ್ : ಬಾಲಿವುಡ್ ನಟ ವಿಕ್ಕಿ ಕೌಶಲ್ ಮುಂಬರುವ ಚಿತ್ರ ‘ಜರಾ ಹಟ್ಕೆ ಜರಾ ಬಚ್ಕೆ’ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಸಿನಿಮಾದಲ್ಲಿ ನಟಿ ಸಾರಾ ಅಲಿ ಖಾನ್ ನಾಯಕಿಯಾಗಿ ಮಿಂಚಿದ್ದು, ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬರು ನೆಚ್ಚಿನ ನಟನ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. ವೇದಿಕೆ ಮೇಲೆ ಆಗಮಿಸಿದ ಮಹಿಳಾ ಅಭಿಮಾನಿಯೊಬ್ಬರು ಭಾವುಕರಾದರು.

“ಕತ್ರಿನಾ ಅವರು ನನ್ನ ಜೀವನದ ಭಾಗವಾಗಿದ್ದಾರೆ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ಆದರೆ, ವಿಕ್ಕಿ ಕೌಶಲ್ ನನ್ನ ಲೈಫ್​. ಈ ಜನ್ಮದಲ್ಲಿ ಕತ್ರಿನಾ ನಿಮ್ಮವಳಾಗಿದ್ದರೂ, ಮುಂದಿನ ಏಳು ಜನ್ಮಗಳಲ್ಲಿ ನೀವು ನನ್ನವರು, ನನ್ನವರು ಮಾತ್ರ ಆಗಿರುತ್ತೀರಿ” ಎಂದು ಹೇಳಿದರು.

ಅಭಿಮಾನಿಯ ಮಾತಿಗೆ ಪ್ರತಿಕ್ರಿಯಿಸಿದ ವಿಕ್ಕಿ, ನಮಸ್ಕರಿಸಿ, ಮುಗುಳ್ನಕ್ಕು ಮತ್ತು ಕೈಗಳನ್ನು ಮಡಚಿದರು. ಆಕೆ ತನ್ನ ಪ್ರೀತಿ ಯನ್ನು ವ್ಯಕ್ತಪಡಿಸಿದಾಗ ಅವರು ಕೂಡ ‘ಐ ಲವ್ ಯೂ ಟೂ’ ಎಂದು ಹೇಳಿದರು. ಬಳಿಕ ತಮ್ಮ ಅಭಿಮಾನಿಗಳೊಂದಿಗೆ ನಟ ಸೆಲ್ಫಿಗೆ ಪೋಸ್ ನೀಡಿದರು.

error: Content is protected !!