Sunday, 15th December 2024

ತಮಿಳು ಬಿಗ್ ಬಾಸ್​ಗೆ ಹೊಸ ನಿರೂಪಕ: ವಿಜಯ್ ಸೇತುಪತಿಯನ್ನು ಕಂಡು ಜನರು ಏನಂದ್ರು..?

ಕನ್ನಡ ಬಳಿಕ ಇದೀಗ ಹಿಂದಿ ಮತ್ತು ತಮಿಳಿನಲ್ಲಿ ಕೂಡ ಬಿಗ್ ಬಾಸ್ (Bigg Boss Tamil) ಕಾರ್ಯಕ್ರಮ ಶುರುವಾಗಿದೆ. ಭಾನುವಾರ ಹಿಂದಿ ಮತ್ತು ತಮಿಳಿನ ಬಿಗ್ ಬಾಸ್​ ಗ್ರ್ಯಾಂಡ್ ಓಪನಿಂಗ್ ನಡೆಯಿತು. ಎಂದಿನಂತೆ ಸಲ್ಮಾನ್ ಖಾನ್ ಹಿಂದಿ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದರೆ ಇತ್ತ ತಮಿಳು ಬಿಗ್ ಬಾಸ್ ಅನ್ನು ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ. ಈ ಮೂಲಕ ಬಿಗ್ ಬಾಸ್ ತಮಿಳಿನ ಹೊಸ ಸೀಸನ್‌ನ ನಿರೂಪಕರಾಗಿ ವಿಜಯ್ ಸೇತುಪತಿ ಪಾದಾರ್ಪಣೆ ಮಾಡಿದರು.

ನಟನೆಯಲ್ಲಿ ಬಹುಮುಖ ಪ್ರತಿಭೆಗೆ ಹೆಸರಾದ ವಿಜಯ್ ಸೇತುಪತಿ ಅವರು ಬೆಳ್ಳಿ ಸೂಟ್‌ ಧರಿಸಿ, ಕ್ಲೀನ್ ಶೇವ್ ಲುಕ್‌ನಲ್ಲಿ ಗ್ರ್ಯಾಂಡ್ ಓಪನಿಂಗ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು. ತಮಿಳಿನಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 1 ರಿಂದ 7 ರವರೆಗೆ ನಟ ಕಮಲ್ ಹಾಸನ್ ಹೋಸ್ಟ್ ಮಾಡಿದ್ದಾರೆ. ಒಟಿಟಿyಲ್ಲಿ ಬಿಡುಗಡೆಯಾದ ಬಿಗ್ ಬಾಸ್ ಅಲ್ಟಿಮೇಟ್ ಕಾರ್ಯಕ್ರಮವನ್ನು ನಟ ಸಿಂಬು ಹೋಸ್ಟ್ ಮಾಡಿದ್ದರು. ಆದರೆ, ಈ ಬಾರಿ ಕಮಲ್ ಹಾಸನ್ ಅವರು ಕೆಲವು ಕಾರಣಗಳಿಂದ ಬಿಗ್ ಬಾಸ್ ಸೀಸನ್ 8 ರಿಂದ ಹೊರಗುಳಿದಿದ್ದಾರೆ.

ಈ ಕಾರಣದಿಂದಾಗಿ, ನಟ ವಿಜಯ್ ಸೇತುಪತಿ ಸೀಸನ್ 8 ರಲ್ಲಿ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಗ್ರ್ಯಾಂಡ್ ಓಪನಿಂಗ್ ದಿನ ಸೇತುಪತಿಯ ಅವರ ಮಾತಿನ ಶೈಲಿ, ಸ್ಪರ್ಧಿಗಳೊಂದಿಗೆ ನಡೆದುಕೊಂಡ ರೀತಿ ಕಂಡು ಜನರು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಸೇತುಪತಿ ನಿರೂಪಣೆಯನ್ನು ಅನೇಕರು ಕೊಂಡಾಡಿದ್ದಾರೆ.

‘‘ಬಿಗ್ ಸ್ಕ್ರೀನ್ ಅಥವಾ ಟಿವಿ ಅಥವಾ ಮೊಬೈಲ್ ಸ್ಕ್ರೀನ್ ಯಾವುದೇ ಇರಲಿ ಈ ಮನುಷ್ಯ ರಾಕ್! ಈ ಸೀಸನ್ ಕುತೂಹಲ ಮೂಡಿಸಿದೆ. ವಿಯ್ ಸೇತುಪತಿ ಅತ್ಯುತ್ತಮ ಹೋಸ್ಟ್ ಆಗಬಹುದು. ಕಮಲ್‌ ಹಾಸನ್​ಗೆ ಇವರು ಉತ್ತಮ ಬದಲಿ ನಿರೂಪಕ’’ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

ಇನ್ನು ಬಿಗ್ ಬಾಸ್ ಸೀಸನ್ 8 ಅನ್ನು ಹೋಸ್ಟ್ ಮಾಡಲು ನಟ ವಿಜಯ್ ಸೇತುಪತಿ ಸುಮಾರು 60 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ವರದಿಗಳಿವೆ. ಈ ಹಿಂದೆ ಕಮಲ್ ಹಾಸನ್ ಅವರು 130 ಕೋಟಿಗೂ ಹೆಚ್ಚು ಪಡೆದುಕೊಳ್ಳುತ್ತಿದ್ದಂತೆ.

BBH 18: ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ: ಕತ್ತೆಯನ್ನು ನೋಡಿ ಶಾಕ್ ಆದ ಜನರು