ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಸಾಗುತ್ತಿದ್ದಂತೆ ರೋಚಕತೆ ಸೃಷ್ಟಿಸುತ್ತಿದೆ. ದೊಡ್ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದೊಂದೆ ಶಾಕ್ ಕೊಡುತ್ತಿದ್ದಾರೆ. ಕಳೆದ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಹೀಗಿದ್ದರೂ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಲು ಹಾಗೂ ಇನ್ನಷ್ಟು ಸೀರಿಯಸ್ನೆಸ್ ಬರಲು ಫೇಕ್ ಎಲಿಮಿನೇಷನ್ ಮಾಡಲಾಯಿತು. ಇದರಲ್ಲಿ ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ಸಿಂಧೋಗಿ ಡೇಂಜರ್ ಝೋನ್ನಲ್ಲಿದ್ದರು.
ಸುದೀಪ್ ಅವರು ಚೈತ್ರಾ ಹಾಗೂ ಐಶ್ವರ್ಯಾ ಇವರಿಬ್ಬರನ್ನೂ ಒಂದು ರೂಮ್‌ಗೆ ಹೋಗಲು ಹೇಳುತ್ತಾರೆ. ಆದರೆ ಇಬ್ಬರದ್ದೂ ಬೇರೆ ಬೇರೆ ರೂಮ್ ಆಗಿತ್ತು. ಒಂದು ವೇಳೆ ಇಬ್ಬರೂ ವಾಪಸ್ಸು ಬರಲಿಲ್ಲ ಅಂದರೆ ಎಲಿಮಿನೇಟ್ ಆದರು ಎಂದರ್ಥ ಎಂದು ಸುದೀಪ್ ಹೇಳಿದರು. ಅದರಂತೆ ಚೈತ್ರಾ ಕುಂದಾಪುರ ಅವರನ್ನ ಕನ್ಫೆಷನ್ ರೂಮ್‌ಗೆ ಮತ್ತು ಐಶ್ವರ್ಯ ಅವರನ್ನ ಆ್ಯಕ್ಟಿವಿಟಿ ರೂಮ್‌ಗೆ ಕಳುಹಿಸಲಾಯಿತು.
ಸುದೀಪ್ ಅವರು ಚೈತ್ರಾ ಅವ್ರೇ ಐಶ್ವರ್ಯ ಅವ್ರೇ ಒಬ್ರು ಹೋಗ್ತಿರೋ, ಇಬ್ಬರು ಹೋಗ್ತಿರೋ ಅನ್ನೋ ಟೆನ್ಶನ್ ಕೂಡ ನೀಡಿದರು. ಕೆಲ ಹೊತ್ತಿನ ಬಳಿಕ ಐಶ್ವರ್ಯಾ ಅವರು ಸೇಫ್ ಆಗಿ ಆ್ಯಕ್ಟಿವಿಟಿ ರೂಮ್‌ನಿಂದ ಹೊರಬಂದು ಪುನಃ ಮನೆಯೊಳಗೆ ಪ್ರವೇಶಿಸಿದರು. ಅತ್ತ ಚೈತ್ರಾ ಕುಂದಾಪುರ ಅವರಿಗೆ ಕನ್ಫೆಷನ್ ರೂಮ್‌ನಲ್ಲಿ ಸ್ಪರ್ಧಿಗಳು ಮಾತನಾಡುತ್ತಿರುವ ಲೈವ್ ವಿಡಿಯೋವನ್ನು ಪ್ಲೇ ಮಾಡಿ ತೋರಿಸಲಾಗುತ್ತಿದೆ.
ಐಶ್ವರ್ಯಾ ಸೇಫ್ ಆಗಿ ಬಂದ ಕಾರಣ ಮನೆಯಲ್ಲಿ ಎಲ್ಲರೂ ಚೈತ್ರಾ ಔಟ್ ಎಂದು ಭಾವಿಸಿದ್ದಾರೆ. ತ್ರಿವಿಕ್ರಮ್, ಮಂಜು, ರಜತ್ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆದರು ಎಂದು ಭಾವಿಸಿ ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್ ಅನ್ನಿಸಿರಬಹುದು. ಅದಕ್ಕೆ ಎಲಿಮಿನೇಟ್ ಮಾಡಿದ್ದಾರೆ ಎಂದಿದ್ದಾರೆ. ಅತ್ತ ಹನುಮಂತ ಚೈತ್ರಕ್ಕ ಹೋದಳು ಪಾಪ ಎಂದರೆ ಧನರಾಜ್ ಅವರು ಚೈತ್ರಾ ಅವರಿಗೆ ಟಾ ಟಾ, ಬೈ, ಬೈ ಮಾಡಿದ್ದಾರೆ.
ಈ ಎಲ್ಲಾ ಮಾತುಗಳನ್ನ ಚೈತ್ರಾ ಕುಂದಾಪುರ ಅವರು ಕನ್ಫೆಷನ್ ರೂಮ್‌ನಲ್ಲಿ ಕೇಳಿಸಿಕೊಂಡಿದ್ದಾರೆ. ಇದನ್ನು ನೋಡಿದ ಚೈತ್ರಾಗೆ ನಿಜವಾದ ಬಿಗ್ ಬಾಸ್ ಆಟ ಇದೇ ಇರಬಹುದು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಚೈತ್ರಾ ಅವರು ಪುನಃ ಮನೆಯೊಳಗೆ ಪ್ರವೇಶ ಪಡೆಯಲಿದ್ದಾರೆ. ಇಂದು ಬಿಗ್ ಬಾಸ್ ಮನೆಯೊಳಗೆ ಕಳೆದ ಸೀಸನ್ನ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದು, ಇದರ ಪ್ರೊಮೋದಲ್ಲಿ ಚೈತ್ರಾ ಅವರು ಕಾಣಿಸಿಕೊಂಡಿದ್ದಾರೆ.