Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್ ರಾವ್ ಮಾಡಿ ಸಾಲ ಎಷ್ಟು ಗೊತ್ತಾ?
Krishna Ajay Rao Interview: ಅಜಯ್ ನಟನೆಯ ಯುದ್ಧಕಾಂಡ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ ‘ಯುದ್ಧಕಾಂಡ ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆ ಯಾಗಲಿದೆ. ಈ ನಡುವೆ ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್ ಕೋಟಿ ಕೋಟಿ ಸಾಲ ಮಾಡಿ ತಮ್ಮ BWD ಕಾರನ್ನು ಮಾರಾಟ ಮಾಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ನಟ ಅಜಯ್ ರಾವ್ ಅವರೇ ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಲವು ಕುತೂಹಲಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ.


ಬೆಂಗಳೂರು: ಒಂದು ಕಾಲದಲ್ಲಿ ಸಖತ್ ಹಿಟ್ ಸಿನಿಮಾ ನೀಡುವ ಮೂಲಕ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡ ನಟ ಅಜಯ್ ರಾವ್ (Krishna Ajay Rao) ಎಕ್ಸ್‌ಕ್ಯೂಸ್ ಮೀ ಸಿನಿಮಾದ ಮೂಲಕ ಖ್ಯಾತಿ ಪಡೆದಿದ್ದ ನಟ ಅಜಯ್ ರಾವ್ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದವರು. ಇದೀಗ ನಟ ಅಜಯ್ ರಾವ್ ಅವರು ಹಲವು ವರ್ಷಗಳ ಬಳಿಕ ಸಿನಿಮಾ ಮಾಡ್ತಿದ್ದಾರೆ. ಅಜಯ್ ನಟನೆಯ ಯುದ್ಧಕಾಂಡ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ ‘ಯುದ್ಧಕಾಂಡ ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆಯಾಗಲಿದೆ.
ಈ ನಡುವೆ ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್ ಕೋಟಿ ಕೋಟಿ ಸಾಲ ಮಾಡಿ ತಮ್ಮ BWD ಕಾರನ್ನು ಮಾರಾಟ ಮಾಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ನಟ ಅಜಯ್ ರಾವ್ ಅವರೇ ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಲವು ಕುತೂಹಲಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಅಜಯ್ ರಾವ್ ಅವರ ಸಂದರ್ಶನದ ವಿಡಿಯೊ ಇಲ್ಲಿದೆ
ಕೋಟಿ ಸಾಲದ ವಿಚಾರವಾಗಿ ಮಾತನಾಡಿದ ಅಜಯ್ ನಾನು ಸಾಲದ ವಿಚಾರವಾಗಿ ಮಾತನಾಡಿದ್ದೇ ಬೇರೆ ಆದರೆ ಅವರಿಷ್ಟದಂತೆ ಜನ ಮಾತನಾಡುತ್ತಿದ್ದಾರೆ. ನಾನು ಎಲ್ಲಿಯೂ ಈ ಸಿನಿಮಾಗಾಗಿ ಸಾಲ ಮಾಡಿದ್ದೇನೆ ಎಂದು ಹೇಳಿಕೊಂಡಿಲ್ಲ. ನನಗೆ ಕೋಟಿ ಸಾಲ ಸಿಕ್ಕಿದೆ ಅಂದರೆ ಅದು ನನ್ನ ಸಾಮರ್ಥ್ಯಕ್ಕೆ ಸಾಕ್ಷಿ. ನನಗೆ ಇಷ್ಟು ಸಾಲ ಸಿಗುತ್ತದೆ ಅಂದರೆ ಅಷ್ಟು ಆದಾಯ ತೆರಿಗೆ ಕಟ್ಟುತ್ತೇನೆ, ನಾನು ಸಿನಿಮಾಗಾಗಿ ಸಾಲ ಮಾಡಿದ್ದೇನೆ ಎಂದು ಎಲ್ಲೂ ಹೇಳಿಲ್ಲ, ಬೇರೆ ಬೇರೆ ಕಾರಣಕ್ಕೆ ಸಾಲವಿದೆ. ಹಾಗಂತ ಆ ಬಗ್ಗೆ ಬೇಸರವಿಲ್ಲ, ಸಾಲ ತೀರಿಸುವ ಶಕ್ತಿ ದೇವರು ನೀಡಿದ್ದಾನೆ ಎಂದು ಈ ಬಗ್ಗೆ ಮಾತನಾಡಿದ್ದಾರೆ.
ನಟ ಅಜಯ್ ರಾವ್ ಯುದ್ದಕಾಂಡ ಚಿತ್ರ ಏಪ್ರಿಲ್ 18ರಂದು ಬಿಡುಗಡೆಯಾಗಲಿದ್ದು ಈ ಚಿತ್ರದ ಕಥೆಯ ಬಗ್ಗೆಯು ಮಾತನಾಡಿದ್ದಾರೆ. ಅಪರಾಧ–ನ್ಯಾಯಾಲಯದ ಕಥಾ ಹಂದರವಿರುವ ಈ ಚಿತ್ರದಲ್ಲಿ ಅಜಯ್ ರಾವ್ ದೌರ್ಜನ್ಯಕ್ಕೊಳಗಾದ ಪುಟ್ಟ ಮಗುವಿನ ನ್ಯಾಯಕ್ಕಾಗಿ ಹೋರಾಡುವ ವಕೀಲನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಜಯ್ ನಾನು ಸಿನಿಮಾವನ್ನು ತೀರಾ ವೈಯಕ್ತಿಕವಾಗಿ ಮಾಡಿದ್ದೇನೆ. ನನಗೂ ಒಬ್ಬಳು ಮಗಳಿದ್ದಾಳೆ, ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ಬೆಳೆದಿರುವ ಕಾರಣ ಈ ಭಾವನತ್ಮಕ ಸಿನಿಮಾ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.
ಇದನ್ನು ಓದಿ: Ajay Rao: ಕೋಟಿ ಗಟ್ಟಲೆ ಸಾಲ ಮಾಡಿಕೊಂಡ ಅಜಯ್ ರಾವ್: ಶಾಕಿಂಗ್ ವಿಚಾರ ಬಹಿರಂಗ
ಪ್ರತಿ ಯುಗದಲ್ಲಿ ಒಂದೊಂದು ಯುದ್ದ ಸಾರಿದ್ದಾರೆ. ರಾಮಾಯಣ, ಮಹಾಭಾರತ ಹೀಗೆ ಇಲ್ಲೂ ಯುದ್ದ ನಡೆದಿದೆ. ಹೀಗಾಗಿ ಅದರ್ಮದ ಕಡೆ ಧ್ವನಿ ಎತ್ತುವುದು ನನ್ನ ಮುಖ್ಯ ಧ್ಯೇಯ ವಿಶೇಷವಾಗಿ ಶೋಷಿತ ಹೆಣ್ಣು ಮಗಳನ್ನು ನೋಡುವ ರೀತಿ ಬದಲಾವಣೆ ಯಾಗಬೇಕು ಎನ್ನುವ ನಿಟ್ಟಿನಲ್ಲಿ ಉತ್ತಮ ಕಂಟೆಂಟ್ ಇರುವ ಸಿನಿಮಾ ಮಾಡಿದ್ದೇನೆ ಸಿನಿಮಾ ಮಾಡುವ ವಿಷಯದಲ್ಲಿ ನಾವು ಬದಲಾಗಬೇಕು. ಜನರಿಗೆ ಉತ್ತಮ ಸಂದೇಶ ಇರುವ ಸಿನಿಮಾ ನೀಡಿದ್ದಲ್ಲಿ ಸ್ವಲ್ಪ ಮಟ್ಟಿಗಾದರೂ ಬದಲಾವಣೆ ಸಾಧ್ಯ ಎಂದು ಹೇಳಿದ್ದಾರೆ.
ಇಂದು ಹೆಣ್ಣು ಮಕ್ಕಳ ವಿರುದ್ಧ ಶೋಷಣೆ ಯಾಗುತ್ತದೆ. ಆದರೆ .ಎಷ್ಟೋ ಪ್ರಕರಣಗಳಿಗೆ ಎಷ್ಟು ವರ್ಷವಾದರೂ ಮುಕ್ತಿ ಸಿಗುವುದಿಲ್ಲ. ನ್ಯಾಯಲಯದ ಮೆಟ್ಟಿಲು ಹತ್ತಿದ ಈ ಪ್ರಕರಣದಲ್ಲಿ ಎಷ್ಟು ವರ್ಷವಾದರೂ ನ್ಯಾಯ ಸಿಗುವುದಿಲ್ಲ. ಹೀಗಾಗಿ ಇಂತಹ ಸಿನಿಮಾಗಳಿಗೆ ಬದಲಾವಣೆ ತರುವ ಸಾಮರ್ಥ್ಯ ಇದೆ, ನಾನು ಒಳ್ಳೆಯ ಮನಸ್ಸಿನಿಂದ ಸಿನಿಮಾ ಮಾಡಿದ್ದೇನೆ ಅಷ್ಟೇ. ಫಲಿತಾಂಶ ಹೇಗೆ ಬಂದರೂ ನಾನು ಒಳ್ಳೆಯ ಸಿನಿಮಾ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ ಎಂದು ಅಜಯ್ ಹೇಳಿಕೊಂಡಿದ್ದಾರೆ.