Monday, 25th November 2024

ಪಂಜಾಬ್ ಬ್ರೇಕಿಂಗ್: 125 ಪ್ರಯಾಣಿಕರಲ್ಲಿ ಸೋಂಕು ಪತ್ತೆ

#Amritsar

ಅಮೃತಸರ: ಪಂಜಾಬ್’ನ ಅಮೃತಸರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರೋನಾ ಸ್ಪೋಟವಾಗಿದೆ.

125 ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ. ಇಟಲಿಯಿಂದ ಪಂಜಾಬ್ ನ ಅಮೃತಸರಕ್ಕೆ ಏರ್ ಇಂಡಿಯಾ ಪ್ಲೈಟ್ ನಿಂದ ಬಂದಿಳಿದ ಪ್ರಯಾಣಿಕರನ್ನ ಕಡ್ಡಾಯ ನಿಯಮದಂತೆ ಟೆಸ್ಟ್ ಗೆ ಒಳಪಡಿಸಲಾಯಿತು. ಒಂದೇ ಫ್ಲೈಟ್ ನಲ್ಲಿ ಇಟಲಿಯಿಂದ ಅಮೃತಸರಕ್ಕೆ ಪ್ರಯಾಣಿಸಿದ್ದ 125 ಪ್ರಯಾಣಿಕರಲ್ಲಿ ಸೋಂಕು ಕಾಣಿಸಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ತಿಳಿಸಿದ್ದಾರೆ.

ಪಂಜಾಬ್ ನಲ್ಲಿ ದಿನೇ ದಿನೇ ಕೇಸ್ ಗಳು ಜಾಸ್ತಿಯಾಗುತ್ತಿದ್ದು, ಕಳೆದೆರಡು ದಿನಗಳಿಂದ ಸೋಂಕು 148% ಹೆಚ್ಚಳ ಕಂಡಿದೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಪಂಜಾಬ್ ಸರ್ಕಾರ ನೈಟ್ ಕರ್ಪ್ಯೂ ಜೊತೆಗೆ ಶಾಲಾ-ಕಾಲೇಜುಗಳನ್ನ ಬಂದ್ ಮಾಡಿದೆ.