ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ಮತ್ತು ಕಿರುಕುಳ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಬೀಡ್‌ನ ಪೊಲೀಸ್ ವರಿಷ್ಠಾಧಿಕಾರಿ ರಾಜಾ ರಾಮಸಾಮಿ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿ ತನ್ನ ತಾಯಿಯನ್ನು ಕಳೆದುಕೊಂಡು ಒಂದೆರಡು ವರ್ಷಗಳಾಗಿವೆ. ಎಂಟು ತಿಂಗಳ ಹಿಂದೆ ಆಕೆಯ ತಂದೆ ಆಕೆಯ ಮದುವೆಯನ್ನು ಮಾಡಿದ್ದರು. ಆದರೆ, ಆಕೆಯ ಪತಿ ಮತ್ತು ಅತ್ತೆ-ಮಾವಂದಿರು ಥಳಿಸಿ ಕೆಟ್ಟದಾಗಿ ನಡೆಸಿಕೊಂಡರು ಎನ್ನಲಾಗಿದೆ.
ಇದರಿಂದ ಆಕೆ ಮತ್ತೆ ತಂದೆಯೊಂದಿಗೆ ವಾಸವಾಗಿದ್ದಾಳೆ ಎಂದು ಹೇಳಿದ್ದಾಳೆ. ತಂದೆಯೂ ದೂರ ಮಾಡಿದಾಗ, ಅವಳು ಬೀಡ್ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಗೆ ಹೋದಳು. ಈ ಸಮಯದಲ್ಲಿ ಲೈಂಗಿಕ ಶೋಷಣೆ ಎದುರಿಸಿದಳು ಎಂದು ವರದಿಯಾಗಿದೆ.