Wednesday, 27th November 2024

2,35,532 ಮಂದಿಗೆ ಕರೋನಾ ಸೋಂಕು ದೃಢ

ನವದೆಹಲಿ: 2,35,532 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 4.08 ಕೋಟಿಗೂ ಅಧಿಕ ಮಟ್ಟ ತಲುಪಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 871 ಜನರು ಬಲಿಯಾಗುವುದರೊಂದಿಗೆ ಒಟ್ಟಾರೆ ಕೋವಿಡ್-19 ಮರಣಗಳ ಸಂಖ್ಯೆ 4,93,198ಕ್ಕೇರಿದೆ.

ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,83,60,710ಕ್ಕೆ ಹೆಚ್ಚಳಗೊಂಡಿದೆ. ಮರಣ ಪ್ರಮಾಣ ಶೇ.1.21ರಷ್ಟಿದೆ. ಒಟ್ಟಾರೆ ಸೋಂಕಿನ ಪ್ರಕರಣಗಳ ಸಂಖ್ಯೆ 4,08,58,241 ರಷ್ಟಿದೆ. ಏತನ್ಮಧ್ಯೆ ದೇಶದಲ್ಲಿ ಇದುವರೆಗೆ ನೀಡಲಾಗಿರುವ ಕೋವಿಡ್ ನಿಯಂತ್ರಕ ಲಸಿಕೆಗಳ ಡೋಸ್‍ಗಳ ಪ್ರಮಾಣ 164.04 ಕೋಟಿ ದಾಟಿದೆ.