Sunday, 15th December 2024

ದ್ವಾರಕಾ: 300 ಕೋಟಿ ರೂಪಾಯಿ ಮಾದಕ ವಸ್ತುಗಳ ವಶ

ಗಾಂಧಿನಗರ : ದ್ವಾರಕಾ ಜಿಲ್ಲೆಯಲ್ಲಿ 300 ಕೋಟಿ ರೂಪಾಯಿ ಮಾದಕ ವಸ್ತುಗಳನ್ನು ಗುಜರಾತ್ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಛ್‌ನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು.

ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ. ಮಾದಕ ವಸ್ತುಗಳು ಪಾಕಿಸ್ತಾನದಿಂದ ಸಮುದ್ರಮಾರ್ಗವಾಗಿ ಗುಜರಾತ್‍ಗೆ ತರಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಆತನಲ್ಲಿ 19 ಪ್ಯಾಕೆಟುಗಳು ಸಿಕ್ಕಿವೆ. ಆತ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮುಂಬ್ರಾ ನಿವಾಸಿಯಾಗಿದ್ದಾನೆ. ಆತ ತರಕಾರಿ ಮಾರುವ ವ್ಯವಸಾಯ ಮಾಡುತ್ತಿದ್ದಾನೆ. ಆತನಿಗೆ ಗುಜರಾತನ ಜಾಮನಗರದಲ್ಲಿ ವಾಸವಾಗಿ ರುವ ಸಲಿಮ ಯಾಕೂಬ್ ಕರಾ ಮತ್ತು ಅಲಿ ಯಾಕೂಬ್ ಕಾರಾ ಇವರಿಬ್ಬರು ಮಾದಕ ವಸ್ತುಗಳು ನೀಡಿದ್ದಾರೆ ಎಂದು ಹೇಳಿದ್ದಾನೆ. ಮನೆಯ ಮೇಲೆ ದಾಳಿ ನಡೆಸಿ 47 ಪ್ಯಾಕೇಟುಗಳನ್ನು ವಶಪಡಿಸಲಾಗಿದೆ.

ಸಲಿಮ ಕರಾ ಇವನಿಗೆ ಈ ಮೊದಲು ಮಾದಕ ವಸ್ತು ವಿರೋಧಿ ಕಾನೂನಿನನ್ವಯ ಕ್ರಮ ತೆಗೆದುಕೊಂಡು ಬಂಧಿಸಲಾಗಿತ್ತು ಹಾಗೂ ನಕಲಿ ನೋಟು ಮತ್ತು ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡಿರುವ ಪ್ರಕರಣದಲ್ಲಿಯೂ ಆತನ ವಿರುದ್ಧ ಕ್ರಮ ಕೈಗೊಳ್ಳ ಲಾಗಿತ್ತು.