Saturday, 12th October 2024

ರಾಜಧಾನಿ ದೆಹಲಿಯಲ್ಲಿ ಹೊಸ 3037 ಕೋವಿಡ್ ಪ್ರಕರಣ ಪತ್ತೆ

Covid

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಗುರುವಾರ 3037 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

3167 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, 40 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ, ಸೋಂಕಿತರಾಗಿ ಗುಣಮುಖ ಹೊಂದಿರುದನ್ನು ಸೇರಿಸಿದರೆ, ಒಟ್ಟು ಪ್ರಕರಣಗಳು 282752 ಕಾಣಿಸಿಕೊಂಡಿವೆ. 5401 ಮಂದಿ ಮೃತಪಟ್ಟಿದ್ದಾರೆ ಎಂದು ದೆಹಲಿ ಸರ್ಕಾರ ವರದಿ ಮಾಡಿದೆ.

ಮಿಜೋರಾಂ: ಮಿಜೋರಾಂ ರಾಜ್ಯದಲ್ಲಿ ಇಂದು 41 ಸೋಂಕಿತರು ಗುಣಮುಖರಾಗಿದ್ದಾರೆ. 2018 ಪ್ರಕರಣಗಳೂ ಪಾಸಿಟಿವ್ ಕೇಸ್ ಗಳಿವೆ. ಇದರಲ್ಲಿ 1638 ಗುಣಮುಖರಾಗಿದ್ದಾರೆ.  380 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಂದಿನವರೆಗೂ ಯಾರೂ ಮೃತ ಪಟ್ಟ ವರದಿಯಾಗಿಲ್ಲ ಎಂದು ಮಿಜೋರಾಂನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.