ಭುವನೇಶ್ವರ: ಒಡಿಶಾ ರಾಜ್ಯದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ 700 ಕ್ಕೂ ಹೆಚ್ಚು ನಕ್ಸಲರು ಮತ್ತು ನಕ್ಸಲ್ ಬೆಂಬಲಿಗರು ಶರಣಾಗಿರುವುದಾಗಿ ಆಂಧ್ರಹಾಲ್ ಬಿಎಸ್ಎಫ್ ಕ್ಯಾಂಪ್ ಮತ್ತು ಮಲ್ಕಾನ್ಗಿರಿ ಪೊಲೀಸರು ತಿಳಿಸಿದರು.
ಪೊಲೀಸರ ಪ್ರಕಾರ ಶರಣಾದವರಲ್ಲಿ 300 ಮಂದಿ ರಂಗಬೆಲ್ ಜಿಲ್ಲೆಯ ಭಜಗುಡ, ಬೈಸಿಗುಡ, ಖಲ್ಜಗುಡ, ಪತ್ರಾಪುಟ್, ಒಂಡೆಪದರ್, ಸಂಬಲ್ಪುರ, ಸಿಂಧಿಪುಟ್, ಪಡಲ್ ಪುಟ್, ಕುಸುಂಪುಟ್, ಮಠಂಪುಟ್ ಮತ್ತು ಜೋಡಿಗುಮ್ಮ ಗ್ರಾಮಗಳಿಗೆ ಸೇರಿದವರು.
ಆಂಧ್ರ ಮತ್ತು ಒಡಿಶಾ ಗಡಿ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳು ಮುಂದುವರಿದಿವೆ. ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ಮತ್ತು ಕೊಲೆಗಳಲ್ಲಿ ಭಾಗಿಯಾಗಿ ದ್ದಾರೆ. ಇದಲ್ಲದೇ ನಕ್ಸಲ್ ಜಾಲದ ಕೆಲ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಹೊಸ ಬೆಳವಣಿಗೆಯ ಭಾಗವಾಗಿ ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ರಸ್ತೆ ಮತ್ತು ಸೇತುವೆಗಳ ಸ್ಥಾಪನೆ, ವೈದ್ಯಕೀಯ ಸೌಲಭ್ಯಗಳು, ಮೊಬೈಲ್ ಟವರ್ಗಳನ್ನು ಸ್ಥಾಪನೆ, ಪ್ರತಿ ಮನೆಗೂ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ ಕಲ್ಪಿಸಿರುವುದು ಉತ್ತಮ ಫಲಿತಾಂಶ ನೀಡಿದೆ. ಇವೆಲ್ಲದರಿಂದಾಗಿಯೇ ನಕ್ಸಲ್ ಬೆಂಬಲಿಗರನ್ನು ಜೀವನದ ಮುಖ್ಯ ವಾಹಿನಿಗೆ ಬರುವಂತೆ ಪ್ರೇರೇಪಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.