ನವದಹಲಿ: ದೇಶಾದ್ಯಂತ ಓಮಿಕ್ರಾನ್ ರೂಪಾಂತರಿ ಭೀತಿ ಮುಂದುವರೆದಿರುವಂತೆಯೇ ದೇಶದಲ್ಲಿ ಕೋವಿಡ್-19 ಸೋಂಕಿನ ಏರಿಳಿಕೆ ಮುಂದುವರೆದಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 8,439 ಹೊಸ ಸೋಂಕು ಪ್ರಕರಣಗಳು, 195 ಸಾವು ವರದಿಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 8,439 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. 195 ಮಂದಿ ಸೋಂಕಿ ತರು ಮೃತಪಟ್ಟಿದ್ದು, ಬಲಿಯಾದವರ ಸಂಖ್ಯೆ 4,73,952ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಕೋವಿಡ್ ಲಸಿಕೆಗಳ ಪ್ರಮಾಣ 129.5 ಕೋಟಿ ಡೋಸ್ ಗೆ ಏರಿಕೆಯಾಗಿದೆ.