Saturday, 23rd November 2024

ಹೊಸ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಇನ್ನೆರಡು ವರ್ಷ ನಿಷೇಧ

ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಕೆಲವು ವಿನಾಯಿತಿ ಗಳೊಂದಿಗೆ ಹೊಸ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ನಿಷೇಧವನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಿದೆ.

ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುಧೆ ಮಾತನಾಡಿ, ಹೊಸ ಕಾಲೇಜುಗಳಿಗೆ ಎರಡು ವರ್ಷಗಳವರೆಗೆ ಅನುಮೋದನೆ ನೀಡದಿರಲು 2020ರಲ್ಲಿ ನಿರ್ಧರಿಸಿತ್ತು. ಇದೀಗ ಸರ್ಕಾರ ರಚಿಸಿದ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ನಿಷೇಧ ಇನ್ನೆರಡು ವರ್ಷಗಳವರೆಗೆ ವಿಸ್ತರಿಸಿದೆ.

ಸಾಂಪ್ರದಾಯಿಕ, ಉದಯೋನ್ಮುಖ, ಬಹುಶಿಸ್ತೀಯ, ವೃತ್ತಿಪರ ಕ್ಷೇತ್ರಗಳಲ್ಲಿ ಹೊಸ ಪಾಲಿ ಟೆಕ್ನಿಕ್ ಕೋರ್ಸ್‌ಗಳನ್ನು ಪಿಪಿಪಿ ಮಾದರಿಯಲ್ಲಿ ಆರಂಭಿಸುವ ರಾಜ್ಯ ಸರ್ಕಾರಗಳ ಪ್ರಸ್ತಾವಕ್ಕೆ ಎಐಸಿಟಿಇ ವಿನಾಯಿತಿ ನೀಡಿದೆ.

ಅಂತೆಯೇ ಕಂಪನಿ ಕಾಯಿದೆ- 2013ರ ಕಲಂ 8ರ ಅಡಿಯಲ್ಲಿ ಸ್ಥಾಪಿಸಲಾದ ಟ್ರಸ್ಟ್, ಸೊಸೈಟಿ, ಕಂಪನಿಯಾಗಿ ನೋಂದಾಯಿಸಿ ಕನಿಷ್ಠ ವಾರ್ಷಿಕ ₹ 5,000 ಕೋಟಿ (ಹಿಂದಿನ ಮೂರು ವರ್ಷಗಳಲ್ಲಿ) ವಹಿವಾಟು ಹೊಂದಿರುವ ಯಾವುದೇ ಸಂಸ್ಥೆಗಳಿಗೆ ಹಾಗೂ ಹಿಂದಿನ ವರ್ಷದ ಎನ್‌ಐಆರ್‌ಎಫ್‌ನಲ್ಲಿ 100ರೊಳಗಿನ ಶ್ರೇಯಾಂಕ ಹೊಂದಿರುವ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ.