Saturday, 23rd November 2024

150 ‘737 ಮ್ಯಾಕ್ಸ್​​’ ವಿಮಾನಗಳ ಖರೀದಿಗೆ ಏರ್ ಇಂಡಿಯಾ ಒಪ್ಪಂದ…!

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಲಿಮಿಟೆಡ್  150 ‘737 ಮ್ಯಾಕ್ಸ್​​’ ವಿಮಾನಗಳ ಖರೀದಿಗೆ ಬೋಯಿಂಗ್  ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ.

50 ‘737 ಮ್ಯಾಕ್ಸ್​​’ ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುವುದು ಬಹುತೇಕ ಖಚಿತ ವಾಗಿದೆ. ಕ್ರಮೇಣ 150 ವಿಮಾನಗಳನ್ನು ಖರೀದಿಸಲಿದೆ ಎಂದು ವರದಿ ತಿಳಿಸಿದೆ.

ಏರ್​ ಇಂಡಿಯಾ ಕೂಡ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹೆಚ್ಚು ಇಂಧನ ದಕ್ಷತೆಯುಳ್ಳ ವಿಮಾನಗಳನ್ನು ಖರೀದಿ ಸುವ ಮೂಲಕ ದೇಶೀಯ ಮತ್ತು ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ಹೆಚ್ಚಿಸುವುದು ಏರ್​ ಇಂಡಿಯಾ ಉದ್ದೇಶ ಎನ್ನಲಾಗಿದೆ.

ಸಿಂಗಾಪುರ ಏರ್​ಲೈನ್ಸ್​ನ ವಿಸ್ತಾರವನ್ನು ಏರ್​ ಇಂಡಿಯಾ ಜತೆ ವಿಲೀನಗೊಳಿಸುವ ಟಾಟಾ ನಿರ್ಧಾರವು ಏರ್​ ಇಂಡಿಯಾವನ್ನು ಜಗತ್ತಿನ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂದು ವರದಿ ತಿಳಿಸಿದೆ. ಈ ವಿಲೀನದಿಂದ ಏರ್​ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಎರಡನೇ ಅತಿದೊಡ್ಡ ಸ್ಥಳೀಯ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ. ವಿಲೀನದ ಬಳಿಕ ಏರ್​ ಇಂಡಿಯಾ ಬಳಿ ಇರುವ ವಿಮಾನಗಳ ಸಂಖ್ಯೆ 218 ಆಗಿರಲಿದೆ.

ಏರ್​ಬಸ್ ಮತ್ತು ಬೋಯಿಂಗ್ ಜತೆ 50 ಶತಕೋಟಿ ಡಾಲರ್ ವಿಮಾನ ಖರೀದಿ ಒಪ್ಪಂದಕ್ಕೆ ಏರ್​ ಇಂಡಿಯಾ ಮುಂದಾಗಿದೆ ಎಂದು ಕೈಗಾರಿಕಾ ಮೂಲಗಳು ಜುಲೈನಲ್ಲಿ ತಿಳಿಸಿದ್ದವು. ಈ ಹಿಂದೆ 2021ರಲ್ಲಿ ಆಕಾಸ ಏರ್​ಲೈನ್​ 72 ‘737 ಮ್ಯಾಕ್ಸ್’ ವಿಮಾನ ಖರೀದಿಗೆ ಆರ್ಡರ್ ಮಾಡಿದ್ದು ಬಿಟ್ಟರೆ ನಂತರ ಯಾವುದೇ ಆರ್ಡರ್ ಬೋಯಿಂಗ್​ಗೆ ಸಿಕ್ಕಿರಲಿಲ್ಲ.

ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್​ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.