ಮುಂಬೈ: ಏರ್ ಇಂಡಿಯಾದ ಯುವ ಮಹಿಳಾ ಪೈಲಟ್ ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ (Mumbai) ಬೆಳಕಿಗೆ ಬಂದಿದೆ. ಮಹಿಳಾ ಪೈಲಟ್‌ನ ಗೆಳೆಯ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಮತ್ತು ಮಾಂಸಾಹಾರಿ ಆಹಾರವನ್ನು ತಿನ್ನದಂತೆ ತಡೆದಿದ್ದಾನೆ. ಇದರಿಂದ ಮನನೊಂದ ಸೃಷ್ಟಿ ತುಳಿ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದವರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಸೃಷ್ಟಿ ತುಳಿ ಎಂಬಾಕೆ ತನ್ನ ಪ್ರಿಯಕರನ ಕಿರುಕುಳದಿಂದ ನೊಂದಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆಕೆಯೊಂದಿಗೆ ಆಗಾಗ್ಗೆ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸುತ್ತಿದ್ದ ಮತ್ತು ಮಾಂಸಾಹಾರ ಸೇವಿಸದಂತೆ ತಡೆಯುತ್ತಿದ್ದ ಎಂಬ ಆರೋಪಗಳು ಕೂಡ ಕೇಳಿಬಂದಿದೆ.
Air India Express pilot Akhilesh Kumar's body flown into Delhi on @IndiGo6E at 2 am. Hear pilot head Ashim Mittra had requested two dozen pilots, ops staff to be present at arrival. Nice gesture to pay last respects from one airline's pilots to the other. Thoughts & prayers 🙏🙏 pic.twitter.com/FPXlmYowzd
— Tarun Shukla (@shukla_tarun) August 9, 2020
ಸೋಮವಾರ ಅಂಧೇರಿಯ ಮರೋಲ್‌ನಲ್ಲಿ ತನ್ನ ಗೆಳತಿ ಸೃಷ್ಟಿ ತುಳಿ ಆತ್ಮಹತ್ಯೆ ಮಾಡಿಕೊಂಡ ನಂತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೆಹಲಿ ಮೂಲದ ಆದಿತ್ಯ ಪಂಡಿತ್ (27) ಎಂಬಾತನನ್ನು ಮುಂಬೈನ ಪೊವೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಸಾರ್ವಜನಿಕವಾಗಿ ನಿಂದಿಸಿ ಮಾಂಸಾಹಾರ ಸೇವಿಸದಂತೆ ತಡೆದು ಸೃಷ್ಠಿ ತುಳಿ ಅವರನ್ನು ಆಕೆಯ ಗೆಳೆಯ ಕೊಲೆ ಮಾಡಿರಬಹುದೆಂದು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಕುಟುಂಬಸ್ಥರು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ.
#AirIndiaCrash #RIP
— The Better India (@thebetterindia) August 10, 2020
Mortal remains of pilot-in-command #DeepakSathe reached Mumbai on Sunday afternoon and was received by his family, Air India officials, and members of the aviation fraternity.
VC: Mahesh Naik @MaheshN1976 pic.twitter.com/IWga9Ukr5v
ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದ ಸೃಷ್ಠಿ
ಇದುವರೆಗಿನ ತನಿಖೆಯಿಂದ ಸೃಷ್ಠಿ ತುಳಿ ಭಾನುವಾರ ಕರ್ತವ್ಯದಿಂದ ವಾಪಸಾಗಿರುವುದು ಬಹಿರಂಗವಾಗಿದೆ. ಇದಾದ ಬಳಿಕ ಅವರು ಈ ಆತ್ಮಹತ್ಯೆಯ ಹೆಜ್ಜೆ ಇಟ್ಟಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ಕು ದಿನಗಳ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊವೈ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜಿತೇಂದ್ರ ಸೋನಾವಾನೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಎಫ್‌ಐಆರ್ ಪ್ರಕಾರ, ಇಬ್ಬರೂ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಪರವಾನಗಿ (ಸಿಪಿಎಲ್) ತರಬೇತಿ ಸಮಯದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದರು.