12,378 ಕೋಟಿ ರೂ.(150 ಬಿಲಿಯನ್ ಡಾಲರ್) ವೆಚ್ಚದಲ್ಲಿ 500 ವಿಮಾನಗಳ ಖರೀದಿಗಾಗಿ ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ ಕಂಪೆನಿಯು ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಮತ್ತು ಏರ್ಬಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
500 ವಿಮಾನಗಳಲ್ಲಿ 430 ನ್ಯಾರೋ ಬಾಡಿ ವಿಮಾನಗಳು, 70 ವೈಡ್ ಬಾಡಿ ವಿಮಾನಗಳು ಸೇರಿವೆ. ಈ ಪೈಕಿ 250 ವಿಮಾನಗಳು ಏರ್ಬಸ್ ಮತ್ತು 250 ಬೋಯಿಂಗ್ ತಯಾರಿಸಿ ಕೊಡಲಿವೆ. ಮುಂದಿನ ಎಂಟು ವರ್ಷಗಳ ಅವಧಿಯಲ್ಲಿ ಏರ್ ಇಂಡಿ ಯಾಕ್ಕೆ ಈ ವಿಮಾನಗಳು ಸಿಗುವ ಸಾಧ್ಯತೆ ಇದೆ. ಕಳೆದ ವರ್ಷ ಏರ್ ಇಂಡಿಯಾ ಖರೀದಿಸಿದ ಟಾಟಾ ಸನ್ಸ್, ಏರ್ಏಶಿಯಾ ಇಂಡಿಯಾ, ವಿಸ್ತಾರ ಏರ್ಲೈನ್ಸ್ ಅನ್ನು ಏರ್ ಇಂಡಿಯಾದೊಂದಿಗೆ ವಿಲೀನ ಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
2011ರಲ್ಲಿ ಅಮೆರಿಕನ್ ಏರ್ಲೈನ್ಸ್ 460 ವಿಮಾನಗಳನ್ನು ಖರೀದಿ, 2019ರಲ್ಲಿ ಇಂಡಿಗೋ ಏರ್ಲೈನ್ಸ್ 300 ವಿಮಾನ ಖರೀದಿಗೆ ತೀರ್ಮಾನಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.