ಮುಂಬೈ: ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ (Aishwarya Rai) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬ ಸುದ್ದಿ ಬಿ ಟೌನ್ನಲ್ಲಿ ಹರಿದಾಡುತ್ತಿದೆ. (Aishwarya- Abhishek Divorce) ಅದಕ್ಕೆ ಪುಷ್ಟಿ ಎನ್ನುವಂತೆ ಇತ್ತೀಚೆಗೆ ನಡೆದ ಪುತ್ರಿ ಆರಾಧ್ಯ ಹುಟ್ಟು ಹಬ್ಬಕ್ಕೆ ಅಭಿಷೇಕ್ ಹಾಗೂ ಬಚ್ಚನ್ ಕುಟುಂಬಸ್ಥರು ಬಹಿರಂಗವಾಗಿ ಆರಾಧ್ಯಾಗೆ ಶುಭ ಕೋರಿರಲಿಲ್ಲ. ಇದೀಗ ಐಶ್ವರ್ಯ ತಮ್ಮ ಹೆಸರಿನಿಂದ ಬಚ್ಚನ್ (Bachchan) ಎಂಬ ಸರ್ನೇಮ್ ಅನ್ನು ತೆಗೆದು ಹಾಕಿದ್ದಾರಾ? ಎಂಬ ಅನುಮಾನ ಶುರು ಆಗಿದೆ.
ದುಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರ ಹೆಸರನ್ನು ಐಶ್ವರ್ಯ ರೈ ಎಂದು ಉಚ್ಛರಿಸಲಾಗಿತ್ತು. ವಿಡಿಯೋ ನೋಡಿದ ನೆಟ್ಟಿಗರು ಜೋಡಿಯ ವಿಚ್ಛೇದನ ಪಕ್ಕಾ ಎಂದು ಹೇಳಿದ್ದರು. ಇದೀಗ ವೈರಲ್ ಆದ ವಿಡಿಯೋದ ಸತ್ಯಾ ಸತ್ಯತೆಗಳೇನು? ನಿಜವಾಗಿಯೂ ಐಶ್ವರ್ಯ ತಮ್ಮ ಹೆಸರಿನ ಮುಂದಿರುವ ಬಚ್ಚನ್ ಹೆಸರನ್ನು ತೆಗೆದು ಹಾಕಿದ್ರಾ ಎಂದು ಫ್ಯಾಕ್ಟ್ ಚೆಕ್ ಮಾಡಿದಾಗ ಅದು ಸುಳ್ಳು ಎಂಬ ಮಾಹಿತಿ ದೊರೆತಿದೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಶ್ವರ್ಯ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಅವರು ವೇದಿಕೆಯ ಮೇಲೆ ಹೆಜ್ಜೆ ಇರಿಸಿದಾಗ, ಹಿನ್ನಲೆಯಲ್ಲಿ ಅವರ ಹೆಸರು ಮತ್ತು ವೃತ್ತಿಯನ್ನು ಐಶ್ವರ್ಯಾ ರೈ , ಇಂಟರ್ನ್ಯಾಷನಲ್ ಸ್ಟಾರ್ ಎಂದು ಕರೆದಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತ್ತು. ವೈವಾಹಿಕ ಜೀವನದಲ್ಲಾಗುತ್ತಿರುವ ಘಟನೆಯಿಂದ ಬಚ್ಚನ್ ಉಪನಾಮವನ್ನು ಕೈ ಬಿಟ್ಟಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಇದರ ಬಗ್ಗೆ ಸತ್ಯಾ ಸತ್ಯತೆಗಳನ್ನು ಪರಿಶೀಲಿಸಿದಾಗ ಅದು ಸುಳ್ಳೆಂದು ಸಾಬೀತಾಗಿದೆ. ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ರೈ ಬಚ್ಚನ್ ಎಂದೇ ತೋರಿಸುತ್ತಿದೆ.
ದುಬೈನಿಂದ ಮರಳಿದ ನಟಿ ಗುರುವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಕಪ್ಪು ಬಣ್ಣದ ಉಡುಪಿನಲ್ಲಿ ಧರಿಸಿರುವ ಐಶ್ವರ್ಯಾ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದರು.
ಸದ್ಯ ಬಾಲಿವುಡ್ ಅಂಗಳದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ವಿಚ್ಛೇದನದ ವದಂತಿ ಜೋರಾಗಿದೆ. ಈ ಜೋಡಿ ಕಳೆದ ಒಂದು ವರ್ಷದಿಂದ ಸಾಮಾಜಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ವರ್ಷದ ಆರಂಭದಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿಯೂ ಇವರು ಬೇರೆ ಬೇರೆಯಾಗಿ ಭಾಗವಹಿಸಿದ್ದರು.
ಇದನ್ನೂ ಓದಿ : Shiva Rajkumar: ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್