Sunday, 12th January 2025

Anand Mahindra: ನನ್ನ ಹೆಂಡ್ತಿ ಸುಂದರವಾಗಿದ್ದಾಳೆ, 90 ಗಂಟೆ ಏಕೆ ಕೆಲಸ ಮಾಡ್ಬೇಕು? L&T ಮುಖ್ಯಸ್ಥರಿಗೆ ಆನಂದ್‌ ಮಹೀಂದ್ರ ಟಾಂಗ್‌

Anand Mahindra

ಮುಂಬೈ: ಇತ್ತೀಚೆಗೆ ಲಾರ್ಸೆನ್ ಆಂಡ್ ಟೂಬ್ರೊ (L&T) ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ (SN Subrahmanyan) ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿರುವ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಉದ್ಯಮಿ ಆನಂದ್‌ ಮಹೀಂದ್ರಾ (Anand Mahindra), ಸುಬ್ರಹ್ಮಣ್ಯನ್ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲಸದ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕೇ ಹೊರತು ಕೆಲಸ ಮಾಡುವ ಗಂಟೆಗಳಿಗಲ್ಲ ಎಂದು ಹೇಳಿದ್ದಾರೆ.

ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್ 2025 ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಹೆಂಡತಿ ಸುಂದರವಾಗಿದ್ದಾಳೆ, ನಾನು ಅವಳನ್ನು ನೋಡುವುದನ್ನು ಇಷ್ಟಪಡುತ್ತೇನೆ. ಆದ್ದರಿಂದಲೇ ನನಗೆ ಕಡಿಮೆ ಸ್ನೆಹಿತರಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವುದಿಲ್ಲ ಎಂದಲ್ಲ. ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿರಲು ಕಾರಣ , ಇದೊಂದು ಅದ್ಬತ ವ್ಯಾಪಾರ ಕೇಂದ್ರವಾಗಿರುವುದು. ಆದ್ದರಿಂದಲೇ ನನ್ನ ಒಂದು ಸಾಮಾಜಿಕ ಜಾಲತಾಣದ ಖಾತೆಯಲ್ಲಿ 11 ಮಿಲಿಯನ್​ ಫಾಲೋವರ್ಸ್‌ ಇದ್ದಾರೆ ಎಂದು ಹೇಳಿದ್ದಾರೆ.

ಇನ್ನು ಕೆಲಸದ ಸಮಯದ ಕುರಿತು ಪ್ರಶ್ನೆ ಮಾಡಿದಾಗ “ನಾನು ಇದರ ಬಗ್ಗೆ ಜಾಸ್ತಿ ಏನೂ ಹೇಳಲು ಬಯಸುವುದಿಲ್ಲ. ಯಾಕೆಂದರೆ ನಾನು ಕೆಲಸ ಮಾಡುವ ಸಮಯಕ್ಕಿಂತ, ಅದರ ಪ್ರಮಾಣ ಹಾಗೂ ಕೆಲಸದ ಗುಣಮಟ್ಟದ ಪ್ರಾಮುಖ್ಯತೆಯನ್ನು ಖಚಿತ ಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

L&T ಚೇರ್‌ಮನ್‌ ಹೇಳಿದ್ದೇನು?

L&T ಚೇರ್‌‌ಮ್ಯಾನ್‌‌ ಎಸ.ಎನ್.ಸುಬ್ರಹ್ಮಣಿಯನ್ ಅವರು ಉದ್ಯೋಗಿಗಳೊಂದಿಗಿನ ಇತ್ತೀಚಿನ ಸಂವಾದದಲ್ಲಿ, ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು. ಸಾಧ್ಯವಾದ್ರೆ ಭಾನುವಾರದಂದೂ ಕೆಲಸ ಮಾಡಿ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಈ ಮೊದಲು ಇನ್ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ 70 ಗಂಟೆಗಳ ಕೆಲಸ ಮಾಡಿ ಎಂದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ಸುದ್ದಿಯನ್ನೂ ಓದಿ : ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡಿ: ಆನಂದ್​ ಮಹೀಂದ್ರಾ ಮನವಿ

Leave a Reply

Your email address will not be published. Required fields are marked *