Friday, 22nd November 2024

ಆರು ರಾಜ್ಯಸಭೆ ಸ್ಥಾನಕ್ಕೆ ಬೈಎಲೆಕ್ಷನ್‌ ದಿನಾಂಕ ಘೋಷಣೆ

Election Commission Of India

ನವದೆಹಲಿ: ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ತಲಾ ಒಂದು ಸ್ಥಾನ ಸೇರಿದಂತೆ ಆರು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆಗೆ ಗುರುವಾರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.

ಆಯೋಗವು ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದು ಮತ್ತು ತಮಿಳುನಾಡಿನಲ್ಲಿ 2 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 4 ರಂದು ಉಪಚುನಾವಣೆಗಳನ್ನು ನಡೆಸಲಿದೆ. ಬಿಹಾರದಲ್ಲಿ ಅಕ್ಟೋಬರ್ 4 ರಂದು ವಿಧಾನಸಭಾ ಕೌನ್ಸಿಲ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಪುದುಚೇರಿಯ ಒಂದು ಸ್ಥಾನಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಅಸ್ಸಾಂ ನಿಂದ ಆಯ್ಕೆಯಾಗಿದ್ದ ರಾಜ್ಯ ಸಭಾ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಆಗಿದ್ದರೆ, ಮಹಾರಾಷ್ಟ್ರದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಶಂಕರ ರಾವ್ ಸತಾವ್ ಮೃತರಾದ ಹಿನ್ನೆಲೆಯಲ್ಲಿ ಖಾಲಿಯಾಗಿತ್ತು. ಪಶ್ಚಿಮ ಬಂಗಾಳದ ಮಾನಸ್​ ರಂಜನ್​ ಭುನಿಯಾ, ಅಸ್ಸಾಂ ರಾಜ್ಯ ಸಭಾ ಸದಸ್ಯ ಬಿಸ್ವಜಿತ್ ದೈರ್ಮರ್ಯ, ತಮಿಳುನಾಡಿನ ಕೆ.ಪಿ.ಮುನುಸಾಮಿ ಮತ್ತು ಆರ್​.ವೈಥಿಲಿಂಗಮ್​ ಮತ್ತು ಮಧ್ಯಪ್ರದೇಶದ ಥಾವರ್​ಚಾಂದ್ ಗೆಹ್ಲೋಟ್​ ರಾಜೀನಾಮೆ ನೀಡಿದ್ದಾರೆ.

ಜತೆಗೆ, ಬಿಹಾರದ ವಿಧಾನಪರಿಷತ್​​ನಲ್ಲಿರುವ ಒಂದು ಖಾಲಿ ಸ್ಥಾನಕ್ಕೂ ಅಕ್ಟೋಬರ್​ 4ರಂದೇ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.