Friday, 22nd November 2024

ಮ.ಪ್ರ: ಸಿಬಿಎಸ್​ಇ 12ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದು

ಭೋಪಾಲ್‌: ಪ್ರಸಕ್ತ ಸಾಲಿನ ಸಾಲಿನ ಸಿಬಿಎಸ್​ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಇದೇ ಹಾದಿ ತುಳಿಯುವ ನಿರ್ಧಾರ ಮಾಡಿದೆ.

ಮಧ್ಯ ಪ್ರದೇಶದಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಮಧ್ಯ ಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಮಧ್ಯ ಪ್ರದೇಶದಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನ ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಂತರ ಚಿಂತೆ ಮಾಡೋಣ. ಪ್ರಸ್ತುತ ಸಂದರ್ಭದಲ್ಲಿ ಅವರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡಲು ಸಚಿವರ ಕಮಿಟಿ ಮಾಡಿದ್ದು ಅವರು ತಜ್ಞರನ್ನ ಸಂಪರ್ಕಿಸಲಿದ್ದಾರೆ ಎಂದು ಚೌಹಾಣ್​ ಹೇಳಿ ದರು.

ಹರಿಯಾಣ ಹಾಗೂ ಗುಜರಾತ್​ ಕೂಡ ತಮ್ಮ ರಾಜ್ಯಗಳಲ್ಲಿ ಪರೀಕ್ಷೆಯನ್ನ ರದ್ದು ಮಾಡುವುದಾಗಿ ಆದೇಶ ಹೊರಡಿಸಿವೆ. ಇತ್ತ ತಮಿಳುನಾಡು ಕೂಡ 12ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಸಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತಿದೆ.