Tuesday, 3rd December 2024

ಛತ್ತೀಸ್‌ಗಢ: ಮತದಾನ ವೇಳೆ ಐಇಡಿ ಸ್ಫೋಟ

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಚುನಾವಣೆಯ ಮತದಾನದ ದಿನದಂದು ಶುಕ್ರವಾರ (ನವೆಂಬರ್ 17) ಛತ್ತೀಸ್‌ಗಢದ ಧಮ್ತಾರಿಯಲ್ಲಿ ನಕ್ಸಲರು ಐಇಡಿ ಸ್ಫೋಟ ನಡೆಸಿದ್ದಾರೆ.

ಸ್ಫೋಟದ ಸಮಯದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸಿಆರ್‌ಪಿಎಫ್ ಜವಾನರು ಸ್ವಲ್ಪದರಲ್ಲೇ ಪಾರಾಗಿದ್ದು, ಅದೃಷ್ಟವಶಾತ್ ಘಟನೆಯಿಂದ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

18,800ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ 8ರಿಂದ ಆರಂಭವಾದ ಮತದಾನ ಸಂಜೆ 5ರವರೆಗೆ ನಡೆಯಲಿದೆ. ಆದಾಗ್ಯೂ, ಗರಿಯಾ ಬಂದ್ ಜಿಲ್ಲೆಯ ಮಾವೋವಾದಿ ಪೀಡಿತ ಬಿಂದ್ರನವಗಢ ಕ್ಷೇತ್ರದಲ್ಲಿರುವ ಕಮರ್‌ಭೌಡಿ, ಅಮಮೋರಾ, ಓಧ್, ಬಡೇ ಗೋಬ್ರಾ, ಗನ್ವರ್ಗಾಂವ್, ಗರೀಬಾ, ನಾಗೇಶ್, ಸಾಹ್ಬಿಂಕಚಾರ್ ಮತ್ತು ಕೊಡೋಮಾಲಿ ಒಂಬತ್ತು ಮತಗಟ್ಟೆಗಳಲ್ಲಿ ಮತದಾನವು ಭದ್ರತಾ ಕಾರಣಗಳಿಗಾಗಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿದೆ.

70 ಕ್ಷೇತ್ರಗಳಲ್ಲಿ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದು, ಸಿಎಂ ಬಘೇಲ್, ಉಪ ಮುಖ್ಯಮಂತ್ರಿ ಟಿ.ಎಸ್. ಸಿಂಗ್ ಡಿಯೋ, ಎಂಟು ರಾಜ್ಯ ಸಚಿವರು ಮತ್ತು ನಾಲ್ವರು ಸಂಸತ್ ಸದಸ್ಯರು ಪ್ರಮುಖರು.