Wednesday, 27th November 2024

Chia Seeds: ಚಿಯಾ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು; ಆದರೆ ನೆನೆಸದೆ ಸೇವಿಸಬಹುದೇ?

ಚಿಯಾ ಬೀಜಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳಿಂದ ತುಂಬಿರುತ್ತದೆ.  ಈ ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಜನರು ಹೆಚ್ಚಾಗಿ ಮೊಸರು, ಪುಡ್ಡಿಂಗ್ ಮತ್ತು ಸ್ಮೂಥಿಗಳನ್ನು ತಯಾರಿಸಲು ಚಿಯಾ ಬೀಜಗಳನ್ನು(Chia Seeds) ಜೆಲ್ ರೂಪದಲ್ಲಿ ಬಳಸುತ್ತಾರೆ. ಈ ಬೀಜಗಳು ಜೆಲ್ ಆಗಲು ಅವುಗಳನ್ನು ನೀರು ಅಥವಾ ಹಾಲಿನಲ್ಲಿ ನೆನೆಸಬೇಕಾಗುತ್ತದೆ. ತಮ್ಮ ನಿಯಮಿತ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇವಿಸುವವರು  ಹೆಚ್ಚಾಗಿ ಅವುಗಳನ್ನು ರಾತ್ರಿಯಿಡೀ ನೆನೆಸಿಟ್ಟು ಸೇವಿಸುತ್ತಾರೆ. ಆದರೆ ಕೆಲವರಿಗೆ ಚಿಯಾ ಬೀಜಗಳನ್ನು ರಾತ್ರಿಯಿಡೀ ನೆನೆಸಲು ಯಾವಾಗಲೂ ಆಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಅವರು  ಈ ಬೀಜಗಳನ್ನು ಹಾಲು ಅಥವಾ ನೀರಿನಲ್ಲಿ 10-15 ನಿಮಿಷಗಳ ಕಾಲ ಮಾತ್ರ ಇಡಬಹುದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ತಿಳಿಯಿರಿ.

ಚಿಯಾ ಬೀಜಗಳು ಕರಗುವ ನಾರನ್ನು ಹೊಂದಿರುತ್ತವೆ, ಇದು ಬಿಸಿ ನೀರು ಅಥವಾ ಹಾಲಿನ ಸಂಪರ್ಕಕ್ಕೆ ಬಂದಾಗ ಸುಲಭವಾಗಿ ಒಡೆಯುತ್ತದೆ. ಆದರೆ ಸುಲಭವಾಗಿ ಜೀರ್ಣಿಸಿಕೊಳ್ಳಲು ಇದನ್ನು ತುಂಬಾ ಹೊತ್ತು ನೆನೆಸಿಡಬೇಕಾಗುತ್ತದೆ. ನಂತರ ಈ ಜೆಲ್ ಅನ್ನು ಓಟ್ ಮೀಲ್, ಮೊಸರು ಮತ್ತು ಸ್ಮೂಥಿಗಳನ್ನು ತಯಾರಿಸಲು ಬಳಸಬಹುದು. ಚಿಯಾ ಬೀಜಗಳು ಮೃದುವಾಗಲು, ಅವುಗಳನ್ನು ಕನಿಷ್ಠ 30 ನಿಮಿಷಗಳ ಕಾಲ ನೆನೆಸಬೇಕು ರಾತ್ರಿಯಿಡೀ ನೆನೆಸುವುದರಿಂದ ಬೀಜಗಳು ತುಂಬಾ ಮೃದುವಾಗುತ್ತವೆ.

Chia Seeds

ಚಿಯಾ ಬೀಜಗಳನ್ನು ನೇರವಾಗಿ ಸೇವಿಸಬಾರದು. ಅವು ಜೀರ್ಣಾಂಗವ್ಯೂಹದಿಂದ ನೀರನ್ನು ಹೀರಿಕೊಳ್ಳಬಹುದು ಮತ್ತು ಹೊಟ್ಟೆಯಲ್ಲಿ ಉಬ್ಬರ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಅಲ್ಲದೇ , ಚಿಯಾ ಬೀಜಗಳಿಂದ ಹೆಚ್ಚಿನ ಪ್ರಯೋಜನ ಪಡೆಯಲು  ಬಾದಾಮಿ ಹಾಲು, ಎಳನೀರು ಅಥವಾ ಜ್ಯೂಸ್‌ಗಳಲ್ಲಿ ನೆನೆಸಬಹುದು.

ಇದನ್ನೂ ಓದಿ: ಪ್ರೋಟೀನ್ ಪೌಡರ್ ಖರೀದಿಸುವ ಮೊದಲು ಈ 5 ಅಂಶಗಳ ಬಗ್ಗೆ ಗಮನ ಇರಲಿ!

ಚಿಯಾ ಬೀಜಗಳನ್ನು ಸೇವಿಸುವುದರಿಂದ  ಜೀವಕೋಶದ ಹಾನಿಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ವಿವಿಧ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಕೆಲವು ರೀತಿಯ ಕ್ಯಾನ್ಸರ್‌ಗಳಿಗೆ  ಕೂಡ ಚಿಯಾ ಬೀಜಗಳು ರಾಮಬಾಣವಾಗಿದೆ. ಚಿಯಾ ಬೀಜಗಳು ದೇಹದ ಆರೋಗ್ಯವನ್ನು ಹೆಚ್ಚಿಸಿ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಚಿಯಾ ಬೀಜಗಳನ್ನು ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿನ ಉರಿಯೂತ ಕಡಿಮೆಯಾಗುತ್ತದೆ. ಈ ನೀರನ್ನು ಪ್ರತಿದಿನ ಕುಡಿಯುವುದರಿಂದ ದೇಹ ತೂಕವನ್ನು ನಿಯಂತ್ರಿಸಬಹುದು.