Thursday, 22nd February 2024

ಚೀನಾಕ್ಕೆ ಮರಳುವುದರ ಬಗ್ಗೆ ಚಿಂತಿಸುವುದಿಲ್ಲ

Dalai Lama

ಧರ್ಮಶಾಲಾ: ತಾನು ಚೀನಾಕ್ಕೆ ಮರಳುವುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಧರ್ಮ ಗುರು ದಲೈಲಾಮಾ ಸ್ಪಷ್ಟಪಡಿಸಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನಡೆದ ಭಾರತ ಮತ್ತು ಚೀನಾದ ಸೈನಿಕರ ಘರ್ಷಣೆಯ ಕುರಿತು ಮಾತನಾಡಿದ ವೇಳೆ , ಕಾಂಗ್ರಾ ತನ್ನ ಶಾಶ್ವತ ನಿವಾಸ. ಚೀನಾಕ್ಕೆ ಮರಳುವುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುರೋಪ್, ಆಫ್ರಿಕಾ ಮತ್ತು ಏಷ್ಯಾದಲ್ಲಿ ಸಾಮಾನ್ಯವಾಗಿ ವಿಷಯಗಳು ಸುಧಾರಿಸುತ್ತಿವೆ. ಚೀನಾ ಕೂಡ ಹೊಂದಿಕೊಳ್ಳುತ್ತಿದೆ. ಆದರೆ ಚೀನಾಕ್ಕೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಭಾರತಕ್ಕೆ ಆದ್ಯತೆ ನೀಡುತ್ತೇನೆ. ಇದು ಅತ್ಯುತ್ತಮ ಸ್ಥಳ. ಕಾಂಗ್ರಾ-ಪಂಡಿತ್ ನೆಹರು ಅವರ ಆಯ್ಕೆಯ ಜಾಗ ಎಂದಿದ್ದಾರೆ.

ಟಿಬೆಟ್‌ನ 14 ನೇ ದಲೈಲಾಮಾ ಅವರು 1959 ರಿಂದ ಹಿಮಾಚಲದ ಧರ್ಮಶಾಲಾದಲ್ಲಿ ವಾಸಿಸುತ್ತಿದ್ದಾರೆ.

ಚೀನೀ ಪಡೆಗಳು ಲಾಸಾದಲ್ಲಿ ಟಿಬೆಟಿಯನ್ ಪ್ರಜೆಗಳನ್ನು ಕ್ರೂರವಾಗಿ ನಿಗ್ರಹಿಸಿದ ನಂತರ ಬಲವಂತವಾಗಿ ಗಡಿಪಾರಾಗಬೇಕಾಗಿ ಬಂದಾಗ ದಲೈಲಾಮಾ ಧರ್ಮಶಾಲಾಗೆ ಬಂದಿದ್ದಾರೆ.

 
Read E-Paper click here

error: Content is protected !!