ಹೊಸದಿಲ್ಲಿ: ಬಹು ನಿರೀಕ್ಷಿತ ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಫೆ. 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆ. 8ರಂದು ಫಲಿತಾಂಶ ಹೊರ ಬೀಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಹೇಳಿದ್ದಾರೆ. 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯ ಅವಧಿ ಫೆ. 23ಕ್ಕೆ ಕೊನೆಗೊಳ್ಳಲಿದೆ (Delhi Assembly Election 2025).
ದಿಲ್ಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼನಾಮಪತ್ರ ಸಲ್ಲಿಕೆಗೆ ಜ. 17 ಕೊನೆಯ ದಿನವಾಗಿದ್ದು, ಜ. 20ರೊಳಗೆ ನಾಮಪತ್ರ ಹಿಂಪಡೆಯಬೇಕು. 85 ವರ್ಷ ಮೇಲ್ಪಟ್ಟ ಮತದಾರರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವಿರುತ್ತದೆ. ಚುನಾವಣಾ ಆಯೋಗದಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ. ವೈಯಕ್ತಿಕವಾಗಿ ಯಾವುದೇ ತಪ್ಪು ಸಂಭವಿಸಿದರೆ ಶಿಕ್ಷೆ ವಿಧಿಸಲು ಮತ್ತು ತಪ್ಪಾಗಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧರಿದ್ದೇವೆʼʼ ಎಂದು ತಿಳಿಸಿದ್ದಾರೆ.
#DelhiElections2025 |
— All India Radio News (@airnewsalerts) January 7, 2025
Polling for 70 members Delhi Assembly will be held on 5th February and counting will be undertaken on 8th February- Rajiv Kumar, Chief Election Commissioner#DelhiElection2025 | @ECISVEEP pic.twitter.com/V87dn03NKw
ಸಾಮಾನ್ಯವಾಗಿ ದಿಲ್ಲಿ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯುವುದು ವಾಡಿಕೆ. 2020ರಲ್ಲಿ ಫೆ. 8ರಂದು ಮತದಾನ ನಡೆದು ಫೆ. 11ರಂದು ಫಲಿತಾಂಶ ಘೋಷಣೆಯಾಗಿತ್ತು. ಕಳೆದ ಬಾರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (Aam Aadmi Party) ಅಧಿಕಾರಕ್ಕೆ ಬಂದಿತ್ತು. 2020ರಲ್ಲಿ ಆಮ್ ಆದ್ಮಿ ಪಕ್ಷ 70ರಲ್ಲಿ ಬರೋಬ್ಬರಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 8 ಸ್ಥಾನಗಳಿಗೆ ಸೀಮಿತವಾಗಿದ್ದರೆ ಕಾಂಗ್ರೆಸ್ ಖಾತೆಯನ್ನೇ ತೆರೆದಿರಲಿಲ್ಲ.
ಈ ಬಾರಿಯೂ ಅಧಿಕಾರಕ್ಕೆ ಮರಳಲು ಎಎಪಿ ಶ್ರಮಿಸುತ್ತಿದ್ದು, ಬಿಜೆಪಿ ಗದ್ದುಗೆಗೆ ಏರಲು ಕಸರತ್ತು ಆರಂಭಿಸಿದೆ. ಈಗಾಗಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿವೆ. ಸೋಮವಾರ ಬಿಡುಗಡೆಯಾದ ಅಂತಿಮ ಮತದಾರರ ಪಟ್ಟಿಯ ಪ್ರಕಾರ, ಈ ಬಾರಿ ರಾಜಧಾನಿಯಲ್ಲಿ 1.5 ಕೋಟಿ ಮತದಾರರು ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಈ ಪೈಕಿ 83.49 ಲಕ್ಷ ಪುರುಷ ಮತದಾರರು ಮತ್ತು 71.73 ಮಹಿಳಾ ಮತದಾರರಿದ್ದಾರೆ. ಇತರ ವರ್ಗಕ್ಕೆ ಸೇರಿದ 1,261 ಮಂದಿ ಹಕ್ಕು ಚಲಾಯಿಸಲಿದ್ದಾರೆ. 2020ರ 1.4 ಕೋಟಿ ಮಂದಿ ಮತದಾನ ಮಾಡಿದ್ದರು.
2015ರಲ್ಲಿ ಭರ್ಜರಿ ಬಹುಮತ ಪಡೆದುಕೊಂಡಿದ್ದ ಎಎಪಿ
2015ರ ಚುನಾವಣೆಯಲ್ಲಿ70 ಸ್ಥಾನಗಳ ಪೈಕಿ ಎಎಪಿ 67 ಕಡೆ ಜಯ ಗಳಿಸಿತ್ತು. ಹೀಗಾಗಿ ಸತತ 3ನೇ ಬಾರಿಗೆ ಗದ್ದುಗೆಗೆ ಏರಲು ಎಎಪಿ ಸಜ್ಜಾಗಿದೆ. ಈ ಬಾರಿ ಬಿಜೆಪಿ ಮತ್ತು ಎಪಿಪಿ ಮಧ್ಯೆ ಬಿರುಸಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Satyendar Jain: 2 ವರ್ಷಗಳ ಜೈಲುವಾಸದ ನಂತರ ಕೊನೆಗೂ ಎಎಪಿ ನಾಯಕ ಸತ್ಯೇಂದ್ರ ಜೈನ್‌ಗೆ ಜಾಮೀನು